Price hike: ಮತ್ತೊಂದು ಬೆಲೆ ಏರಿಕೆ ಬಿಸಿ! ಲೇಖನಿ ಸಾಮಾಗ್ರಿ ಬೆಲೆ ಏರಿಕೆ!

Share the Article

Price hike: ಶೈಕ್ಷಣಿಕ ವರ್ಷದ ಆರಂಭದ ಹೊತ್ತಲ್ಲೆ ವಿದ್ಯಾರ್ಥಿಗಳ ಓದು-ಬರಹಕ್ಕೆ ಬೇಕಾದ ಅಗತ್ಯ ಪರಿಕರಗಳು ದುಬಾರಿ (Price hike) ಆಗಿದೆ. ಇದರಿಂದ ಪೋಷಕರು ಹಾಗೂ ವಿಧ್ಯಾರ್ಥಿಗಳಿಗೆ ಹೊರೆಯಾಗಿದೆ. ಪೆನ್, ಪೆನ್ಸಿಲ್, ನೋಟ್​ಬುಕ್, ಡ್ರಾಯಿಂಗ್ ಬುಕ್ಸ್, ಪೇಂಟಿಂಗ್ ಪೆನ್, ನೋಟ್ ಪ್ಯಾಡ್ ಇತ್ಯಾದಿ ಉತ್ಪನ್ನಗಳ ಬೆಲೆ ಶೇ 20 ವರೆಗೂ ಏರಿಕೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವ್ಯಾಪಾರಿಯೊಬ್ಬರು, ಪ್ರತಿ 5-6 ತಿಂಗಳಿಗೊಮ್ಮೆ ಶಾಲೆಗಳ ಪುನರ್ ಆರಂಭದ ವೇಳೆ ಬೆಲೆ ಏರಿಕೆ ಆಗುವುದು ಸಹಜ ಎಂದಿದ್ದಾರೆ. ಲೇಖನ ಸಾಮಗ್ರಿಗಳನ್ನು ಉತ್ಪಾದಿಸುವ ಸಂಸ್ಥೆಗಳು ಉತ್ಪಾದನಾ ವೆಚ್ಚ ಹೆಚ್ಚಳ ಮಾಡಿರುವುದರಿಂದ ಉತ್ಪನ್ನಗಳ ಬೆಲೆ ಹೆಚ್ಚಾಗಿದೆ ಎಂದಿದ್ದಾರೆ.

Comments are closed.