Arecanut : 60,000 ಗಡಿ ದಾಟುವತ್ತ ಅಡಿಕೆ ದರ !!

Arecanut : ರಾಜ್ಯದಲ್ಲಿ ವಿವಿಧ ವಸ್ತುಗಳ ಬೇಡಿಕೆದರ ಏರಿಕೆಯಾಗುತ್ತಿರುವಂತೆಯೇ ಅಡಕೆ ಬೆಲೆಯಲ್ಲಿಯೂ ಕೂಡ ನಿರಂತರ ಏರಿಕೆ ಕಾಣುತ್ತಲೇ ಇದೆ. ಇದು ರೈತರಿಗೆ ನೆಮ್ಮದಿಯನ್ನು ತರಿಸಿದೆ. ಈ ಬೆನ್ನಲ್ಲೇ ಅಡಿಕೆ ದರವು 60,000 ಗಡಿ ದಾಟುವತ್ತ ಮುನ್ನುಗ್ಗುತ್ತಿದೆ.

ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಆಗಿದೆ. ಇದೀಗ ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿದೆ. ಅಡಿಕೆ ಧಾರಣೆ ಹೆಚ್ಚಾಗುತ್ತಿದ್ದಂತೆ ಅಡಿಕೆ ಬೆಳೆಗಾರರು ಮಾರುಕಟ್ಟೆಗೆ ಅಡಿಕೆ ಬಿಡಲು ಆಗಮಿಸುತ್ತಿದ್ದಾರೆ. ಕಳೆದ 12 ದಿನಗಳಿಂದಲೂ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡು ಬಂದಿದೆ. ಇನ್ನು ಸ್ವಲ್ಪ ದಿನಗಳು ಹೀಗೆ ಮುಂದುವರಿದರೆ ಪ್ರತಿ ಕ್ವಿಂಟಲ್ ಅಡಿಕೆಗೆ 60 ಸಾವಿರ ಆದರೂ ಅಚ್ಚರಿ ಏನಿಲ್ಲ. ಅಡಿಕೆ ಧಾರಣೆ ಏರುಮುಖದತ್ತ ಸಾಗುತ್ತಿರುವುದು ಅಡಿಕೆ ಬೆಳೆಗಾರರ ಖುಷಿಗೆ ಕಾರಣವಾಗಿದ್ದರೆ, ಮತ್ತೆ ಕೆಲ ಅಡಿಕೆ ದಾಸ್ತಾನು ಮಾಡಿದವರು ಇನ್ನೂ ಧಾರಣೆ ಹೆಚ್ಚಾಗುವ ವಿಶ್ವಾಸದಲ್ಲಿದ್ದಾರೆ.

ಇದೀಗ ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ಪ್ರತಿ ಕ್ವಿಂಟಲ್ ಗೆ ಗರಿಷ್ಟ ಎಂದರೆ 56,900 ಆಗಿದ್ದರೆ, ಕನಿಷ್ಠ 54,099 ರೂಪಾಯಿ ಆಗಿದೆ. ಸರಾಸರಿ 55, 656 ರೂಪಾಯಿ ದಾಖಲಿಸಿದೆ. ಪ್ರತಿ ಕ್ವಿಂಟಲ್ ಬೆಟ್ಟೆ ಅಡಿಕೆಗೆ ಗರಿಷ್ಠ ಬೆಲೆ 27,000 ರೂಪಾಯಿ, ಕನಿಷ್ಠ ಬೆಲೆ 21,786 ರೂಪಾಯಿ, ಸರಾಸರಿ ಬೆಲೆ 25,162 ರೂಪಾಯಿಯಷ್ಟು ವಹಿವಾಟು ಮುಗಿಸಿದೆ.

Comments are closed.