Pune: ತಾಯಿ, ಮಗಳು ಇಬ್ಬರಿಗೂ ಅಕ್ರಮ ಸಂಬಂಧ – ಮಗಳ ಬೆತ್ತಲೆ ವಿಡಿಯೋ ಮಾಡಿ ಹರಿಬಿಟ್ಟ ತಾಯಿ

Share the Article

Pune: ತನ್ನ ಅಕ್ರಮ ಸಂಬಂಧವನ್ನು ಬಯಲು ಮಾಡಿದ ಕಾರಣಕ್ಕಾಗಿ ತಾಯಿ ಒಬ್ಬಳು ತನ್ನ ಸ್ವಂತ ಮಗಳ ಬೆತ್ತಲೆ ವಿಡಿಯೋವನ್ನು ಚಿತ್ರೀಕರಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾಳೆ.

ಪರಪುರುಷನ ಜತೆ ತಾಯಿಯ ಅಕ್ರಮ ಸಂಬಂಧ ಬಯಲು ಮಾಡಿದ್ದಕ್ಕೆ ಸ್ವಂತ ಮಗಳ ಬೆತ್ತಲೆ ವಿಡಿಯೋ ಚಿತ್ರಿಸಿ ತಾಯಿಯೇ ಎಲ್ಲೆಡೆ ಹರಿದುಬಿಟ್ಟಿದ್ದಾಳೆ. ಇಬ್ಬರ ನಡುವಿನ ಅಕ್ರಮ ಸಂಬಂಧವನ್ನು ಪುತ್ರಿ ಹಿರಿಯರೊಬ್ಬರಿಗೆ ತಿಳಿಸಿದ ಕಾರಣ ಕೋಪಗೊಂಡು ತಾಯಿ ಹಾಗೂ ಆಕೆಯ ಬಾಯ್ ಫ್ರೆಂಡ್ ಅಪ್ರಾಪ್ತ ಬಾಲಕಿಯ ಬೆತ್ತಲೆ ದೃಶ್ಯ ಚಿತ್ರಿಸಿ ಎಲ್ಲೆಡೆ ವಿಡಿಯೋ ವೈರಲ್ ಮಾಡಿದ್ದಾರೆ.

ಇನ್ನು ಅಪ್ರಾಪ್ತ ಬಾಲಕಿಯೂ ಬಾಯ್ ಫ್ರೆಂಡ್ ಇಟ್ಟುಕೊಂಡಿದ್ದಳು ಎನ್ನಲಾಗಿದೆ. ಮಗಳ ಮೇಲಿನ ಕೋಪಕ್ಕೆ ತಾಯಿ ತನ್ನ ಸಂಬಂಧಿಕರಿಗೂ ವಿಡಿಯೋ ಕಳುಹಿಸಿದ್ದಾಳೆ. ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಈ ಸಂಬಂಧ ವಿಚಾರಣೆ ಆರಂಭಿಸಿದ್ದಾರೆ.

Comments are closed.