America: ಮನುಷ್ಯರ ಮೂಳೆ, ತಲೆ ಬುರುಡೆಗಳನ್ನು ಮಾರಾಟ ಮಾಡುತ್ತಿದ್ದ ಮಹಿಳೆ ಅರೆಸ್ಟ್

America: ಬುಕ್ ಮಾರ್ಕೆಟ್‌ ಪ್ಲೇಸ್‌ ನಲ್ಲಿ ಮನುಷ್ಯರ ಮೂಳೆಗಳು ಮತ್ತು ತಲೆಬುರುಡೆಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ಫ್ಲೋರಿಡಾದಲ್ಲಿ ಮಹಿಳೆಯೊಬ್ಬಳನ್ನು ಬಂಧಿಸಲಾಗಿದೆ.

ಹೌದು, ಮನುಷ್ಯರ ತಲೆಬುರುಡೆ, ಮೂಳೆಗಳನ್ನು ಮಾರಾಟ ಮಾಡುತ್ತಿದ್ದ 52 ವರ್ಷದ ಮಹಿಳೆಯೊಬ್ಬಳನ್ನು ಬಂಧಿಸಿ ಬಳಿಕ ಜಾಮೀನಿನ ಮೂಲಕ ಬಿಡುಗಡೆ ಮಾಡಲಾದ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.

ಕಿಂಬರ್ಲಿ ಸ್ಕಾಪರ್‌ ಹೆಸರಿನ “ವಿಕೆಡ್‌ ವಂಡರ್‌ಲ್ಯಾಂಡ್‌’ ಎಂಬ ಅಂಗಡಿ ಹಾಗೂ ಫೇಸ್‌ಬುಕ್‌ ಮೂಲಕ ಮನುಷ್ಯರ ಮೂಳೆಯನ್ನು ಮಾರಾಟ ಮಾಡುತ್ತಿದ್ದಳು ಎನ್ನಲಾಗಿದ್ದು, ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಂಧನಕ್ಕೊಳಗಾಗಿದ್ದ ಕಿಂಬರ್ಲಿ 6.45 ಲಕ್ಷ ರೂ. ಬಾಂಡ್‌ ನೀಡುವ ಮೂಲಕ ಜಾಮೀನು ಪಡೆದಿದ್ದಾಳೆ ಎಂದು ವರದಿಯಾಗಿದೆ.

Comments are closed.