Bramhanada Guruji: ಒಂದೂವರೆ ವರ್ಷದಲ್ಲಿ ಮೋದಿ ರಾಜೀನಾಮೆ, ಇವರೇ ದೇಶದ ಮುಂದಿನ ಪ್ರಧಾನಿ !! ಸ್ಪೋಟಕ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ

Bramhanada Guruji: ನರೇಂದ್ರ ಮೋದಿ ಒಂದೂವರೆ ವರ್ಷದಲ್ಲಿ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರಿನಲ್ಲಿ ಪ್ರಸಿದ್ಧ ಕರಗ ಮಹೋತ್ಸವ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಬ್ರಹ್ಮಾಂಡ ಗುರೂಜಿ ಧರ್ಮರಾಯಸ್ವಾಮಿ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ಈ ವೇಳೆ ಮರು ಪ್ರಧಾನಿ ನರೇಂದ್ರ ಮೋದಿಯವರ ಮುಂದಿನ ರಾಜಕೀಯ ಭವಿಷ್ಯದ ಕುರಿತು ಸ್ಫೋಟಕ ಭವಿಷ್ಯ ನುಡಿದಿದ್ದು, ವೈರಾಗ್ಯ ಬಂದಮೇಲೆ ರಾಜೀನಾಮೆ ಕೊಡೋದು, ವಿಶೇಷವಾಗಿ ಸ್ಥಾನ ಬಿಟ್ಟುಕೊಟ್ಟು ಹೋಗುವುದು ಸಾಮಾನ್ಯ. ಸನ್ಯಾಸಿಯೊಬ್ಬ ದೇಶವನ್ನು ಬಳಿಕ ನಡೆಸಿಕೊಂಡು ಹೋಗುತ್ತಾನೆ ಎಂದಿದ್ದಾರೆ.

ಇನ್ನೂ ಕಡೆದ ಲೋಕಸಭಾ ಚುನಾವಣೆಗೂ ಮುಂಚಿತವಾಗಿಯೂ ಬ್ರಹ್ಮಾಂಡ ಗುರೂಜಿಯವರು ಮೋದಿಯವರು ಪ್ರಧಾನಿಯಾಗುವ ಕುರಿತು ಭವಿಷ್ಯ ನೋಡಿದಿದ್ದು, ಆಗಲು ಇದೇ ವಿಚಾರವನ್ನು ಪ್ರಸ್ತಾಪಿಸಿದ್ದರು. ಹೌದು, ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಗುರೂಜಿ ಮೋದಿ ಅವರ ಜಾತಕದಲ್ಲಿ 12 ವರ್ಷಗಳ ಕಾಲ ಪ್ರಧಾನಿ ಆಗುವ ಯೋಗ ಇದೆ. ಈಗಾಗಲೇ 10 ವರ್ಷ ಮುಗಿದಿದೆ. ಇನ್ನು ಎರಡು ವರ್ಷ ಮಾತ್ರ ಬಾಕಿ. ಹೀಗಾಗಿ ಮುಂದೆಯೂ ಅವರು ಪ್ರಧಾನಿ ಆಗಿ ಆಯ್ಕೆಯಾಗುತ್ತಾರೆ. ಆದರೆ ಎರಡು ವರ್ಷ ಮಾತ್ರ ಅಧಿಕಾರದಲ್ಲಿ ಇರುತ್ತಾರೆ ಎಂದು ಹೇಳಿದ್ದರು.

ಇದು ಸಂಭವಿಸುವುದು ಹೇಗೆ ಎಂದು ತಿಳಿಸಿದ ಅವರು ಅಷ್ಟು ಹೊತ್ತಿಗಾಗಲೇ ಮೋದಿ ಅವರಿಗೆ ವೈರಾಗ್ಯ ಬರಬಹುದು. ಅಧಿಕಾರ, ಆಡಳಿತ ಸಾಕೆನಿಸಬಹುದು. ಸಂತೋಷದಿಂದಲೇ ಅವರು ಪದತ್ಯಾಗ ಮಾಡಬಹುದು. ಬೇರೆ ಯಾರೋ ಉತ್ತರಾಧಿಕಾರಿಯನ್ನು ಕೂರಿಸಿ ಹಿಂದಿನಿಂದ ಆಡಳಿತ ಮಾಡಬಹುದು. ಇಲ್ಲವಾದರೆ ಸ್ವಾಭಿಮಾನಕ್ಕೆ ಧಕ್ಕೆ ಆಗಿಯೂ ಅಧಿಕಾರ ತ್ಯಜಿಸಬಹುದು. ಒಟ್ಟಿನಲ್ಲಿ ಏನಾದರೂ ಒಂದು ಕಾರಣದಿಂದ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಿ ಕುತೂಹಲ ಕೆರಳಿಸಿದ್ದರು. ಇದೀಗ ಮತದ ವಿಚಾರವನ್ನು ಮರು ಪ್ರಸ್ತಾಪಿಸಿದ್ದಾರೆ.

Comments are closed.