Rajath Kishan: ಮಚ್ಚು ಹಿಡಿದು ರೀಲ್ಸ್‌ ಪ್ರಕರಣ; ವಿನಯ್-ರಜತ್‌ ಗೆಳೆತನದಲ್ಲಿ ಬಿರುಕು!

Share the Article

Rajath Kishan: ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಗ್‌ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌ ಗೌಡ-ರಜತ್‌ ಕಿಶನ್‌ ಸ್ನೇಹದಲ್ಲಿ ಬಿರುಕು ಮೂಡಿದೆ.

ಮಚ್ಚು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧನ ಕೂಡಾ ಆಗಿತ್ತು. ನಂತರ ಪರಪ್ಪನ ಅಗ್ರಹಾರಕ್ಕೂ ಹೋಗಿ ಬಂದಿದ್ದರೂ. ಅನಂತರ ವಿನಯ್‌ ವಿಡಿಯೋ ಮಾಡಿ ರೀಲ್ಸ್‌ ಮಾಡಿದ್ದು ತಪ್ಪು ಎಂದೆಲ್ಲ ಹೇಳಿದ್ದರು. ಆದರೆ ರಜತ್‌ ಮಾತ್ರ ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ರೀಲ್ಸ್‌ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅಕ್ಷಯ್ ಸ್ಟುಡಿಯೋದಲ್ಲಿ ಖಾಸಗಿ ಕಾರ್ಯಕ್ರಮ ಇತ್ತು. ಕಾರ್ಯಕ್ರಮ ಮುಗಿಸಿ ಹೊರಗೆ ಬಂದ ವೇಳೆ ನಾನೇ ರೀಲ್ಸ್ ಮಾಡೋಣ ಅಂತ ವಿನಯ್‌ಗೆ ಹೇಳಿದ್ದೆ. ಅಲ್ಲೇ ಸೆಟ್‌ನಲ್ಲಿದ್ದ ಫೈಬರ್ ಮಚ್ಚು ತಗೊಂಡು ರೀಲ್ಸ್ ಮಾಡಿ ಇಬ್ಬರು ಇನ್‌ಸ್ಟಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ವಿ. ನಾವು ಫೈಬರ್ ಮಚ್ಚು ಬಳಸಿ ರೀಲ್ಸ್ ಮಾಡಿದ್ದು, ಆಸಲಿ ಮಚ್ಚು‌ ಬಳಸಿಲ್ಲ. ಮಚ್ಚು ಹಿಡಿದು ರೀಲ್ಸ್ ಮಾಡೋದು ತಪ್ಪು ಅಂತ ಗೊತ್ತಿರಲಿಲ್ಲ, ಯಾರು ಕೂಡ ಮುಂದೆ ಈ ರೀತಿ ಮಾಡಬೇಡಿ ಅಂತ ಮನವಿ ಕೂಡ ಮಾಡಿದ್ದಾರೆ.

ಕಳೆದ 11 ವರ್ಷಗಳಿಂದ ನಾನು ವಿನಯ್, ಸ್ನೇಹಿತರು. ಬಿಗ್ ಬಾಸ್‌ಗೆ ಹೋಗೋಕು ಮುಂಚೆ ಪರಿಚಯ ಇತ್ತು. ಆದರೆ ರೀಲ್ಸ್ ಮಾಡಿ ಜೈಲಿಗೆ ಹೋಗಿ ಬಂದ ನಂತರ ಅವ‌ನೇ ಮಾಧ್ಯಮಗಳಿಗೆ ಮಾತಾಡೋದು ಬೇಡ ಅಂದ. ನಂತರ ಅವನೇ ಮೊದಲು ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾನೆ. ಆಮೇಲೆ ನನ್ನಿಂದಲೇ ಇದೆಲ್ಲಾ ಆಯ್ತು ಅನ್ನೋ ತರ ನಡ್ಕೋತಿದ್ದಾನೆ. ಕಳೆದ ಒಂದು ವಾರದಿಂದ ಅವನ ಅಕೌಂಟ್‌ನಲ್ಲಿ ಕೆಲವರು ರಜತ್ ಫ್ರೆಂಡ್‌ಶಿಪ್‌ ಕಟ್ ಮಾಡು ಅಂತಾ ವಿನಯ್‌ಗೆ ಕಾಮೆಂಟ್ ಮಾಡ್ತಿದ್ದಾರೆ. ಆ ಕಾಮೆಂಟ್‌ಗಳಿಗೆ ವಿನಯ್ ಕೂಡ ಲೈಕ್ಸ್ ಕೊಡ್ತಿದ್ದಾನೆ. ಇದು ಸರಿಯಿಲ್ಲ, ನನ್ನ ಫ್ರೆಂಡ್‌ಶಿಪ್‌ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ. ಅದು ಬಿಟ್ಟು ಈ ರೀತಿ ಮಾಡೋದು ಸರಿಯಿಲ್ಲ ಅಂತ ವಿನಯ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Comments are closed.