Shirva: ಪಿಯುಸಿ ಪರೀಕ್ಷೆಯಲ್ಲಿ ಮೂಡುಬೆಳ್ಳೆಯ ತಾಯಿ ಮತ್ತು ಮಗಳು ಪಾಸ್‌!

Shirva: ಪಿಯುಸಿ ಪರೀಕ್ಷೆಯಲ್ಲಿ ಮೂಡುಬೆಳ್ಳೆಯ ತಾಯಿ ಪ್ರಥಮ ಶ್ರೇಣಿಯಲ್ಲಿ ಮತ್ತು ಮಗಳು ವಿಶಿಷ್ಟ ಶ್ರೇಣಿಯಲ್ಲಿ ಜೊತೆಯಾಗಿಯೇ ದ್ವಿತೀಯ ಪಿಯುಸಿ ಪಾಸಾಗುವ ಮೂಲಕ ಸಾಧನೆ ಮಾಡಿದ್ದಾರೆ.

ಮೂಡುಬೆಳ್ಳೆ ನಿವಾಸಿ ಸುನೀತಾ ಪೂಜಾರಿ ಅಂಗನವಾಡಿ ಕಾರ್ಯಕರ್ತೆ, ಇವರ ಪುತ್ರಿ ಸನ್ನಿಧಿ ಹೆಚ್‌ ಪೂಜಾರಿ ಅಮ್ಮ ಮಗಳು.

ಸುನೀತಾ ಅವರು 27 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಡುಪಿ ಸರಕಾರ ಮಹಿಳಾ ಪ.ಪೂ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಬರೆದು 401 ಅಂಕ ತಗೊಂಡು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಮಗಳು ಸನ್ನಿಧಿ ಮೂಡುಬೆಳ್ಳೆ ನೆಲ್ಲಿಕಟ್ಟೆ ಜ್ಞಾನಗಂಗಾ ಪ.ಪೂ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 542 ಅಂಕ ಪಡೆದಿದ್ದಾರೆ.

Comments are closed.