Home News 2nd PU Result : ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿಯ ದೀಕ್ಷಾ ಆರ್ ರಾಜ್ಯಕ್ಕೆ ಪ್ರಥಮ!!

2nd PU Result : ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿಯ ದೀಕ್ಷಾ ಆರ್ ರಾಜ್ಯಕ್ಕೆ ಪ್ರಥಮ!!

Hindu neighbor gifts plot of land

Hindu neighbour gifts land to Muslim journalist

2nd PU Result : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ(2nd PUC Result)ವನ್ನು ಪ್ರಕಟಿಸಿದೆ. ವಿಜ್ಞಾನ ವಿಭಾಗದಲ್ಲಿ ತೀರ್ಥಹಳ್ಳಿ ವಾಗ್ದೇವಿ ಶಿಕ್ಷಣ ಸಂಸ್ಥೆಯ ದೀಕ್ಷಾ ಆರ್ ಎಂಬ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ದೀಕ್ಷ ಅವರು ವಿಜ್ಞಾನಿ ವಿಭಾಗದಲ್ಲಿ 600 ಕ್ಕೆ 599 ಅಂಕಗಳನ್ನು ಪಡೆದಿದ್ದಾರೆ. ಅಪ್ಪ ಅಮ್ಮ ಇಬ್ಬರು ಕೂಡ ಶಿಕ್ಷಕರಾಗಿದ್ದು ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಾಗ್ದೇವಿ ಕಾಲೇಜಿನ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು, ಸಂಬಂಧಿಗಳು, ಕುಟುಂಬದ ಸ್ನೇಹಿತರು, ಅಕ್ಕಪಕ್ಕದ ಮನೆಯವರು ಹಾಗೂ ಮಾಧ್ಯಮದವರು ದೀಕ್ಷಾ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ಸಿಹಿ ತಿನ್ನಿಸಿ ಶುಭ ಹಾರೈಸಿದರು.

ತಮ್ಮ ಈ ಸಾಧನೆ ಕುರಿತು ಮಾತನಾಡಿದ ದೀಕ್ಷ ಅವರು ‘ರಾಜ್ಯಕ್ಕೆ ಮೊದಲ ರ‍್ಯಾಂಕ್ ಬರುವ ಫಲಿತಾಂಶ ನಿರೀಕ್ಷಿಸಿರಲಿಲ್ಲ. ನಾನು ಪ್ರತಿದಿನ ಓದುತ್ತಿದ್ದೆ. ಕಾಲೇಜಿನಲ್ಲಿ ಉಪನ್ಯಾಸಕರು ಚೆನ್ನಾಗಿ ಕಲಿಸುತ್ತಿದ್ದರು. ಯಾವುದೇ ಡೌಟುಗಳಿದ್ದರು ತಿಳಿಸಿ ಕೊಡುತ್ತಿದ್ದರು. ಅಲ್ಲದೆ ಯುಟ್ಯೂಬ್‌ನಲ್ಲೂ ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನೋಡುತ್ತಿದ್ದೆ. ಆದ್ದರಿಂದ ವಿಷಯಗಳು ಹೆಚ್ಚು ಮನದಟ್ಟಾದವು. ಇದು ಪರೀಕ್ಷೆಯಲ್ಲಿ ಅನುಕೂಲವಾಯಿತು’ ಎಂದು ಹೇಳಿದ್ದಾರೆ.