Vidhanasoudha: ವಿಧಾನಸೌಧ ವೀಕ್ಷಣೆಗೂ ಶುಲ್ಕ- ರಾಜ್ಯ ಸರಕಾರದ ಮಹತ್ವದ ನಿರ್ಧಾರ!

Vidhanasoudha: ವಿಧಾನಸೌಧ ವೀಕ್ಷಣೆಗೆ ಪ್ರವಾಸಿಗರಿಂದ ಶುಲ್ಕ ವಸೂಲಿಗೆ ರಾಜ್ಯ ಸರಕಾರ ಮುಂದಾಗಿರುವ ಕುರಿತು ವರದಿಯಾಗಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ವಿಧಾನಸೌಧ ವೀಕ್ಷಣೆಗೆ ಟೂರ್ ಗೈಡ್ ಏರ್ಪಡಿಸಲಾಗಿದೆ. ಸಾರ್ವತ್ರಿಕ ರಜಾ ದಿನಗಳಂದು ಮಾತ್ರ ಟೂರ್ ಗೈಡ್ ಇರುತ್ತದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರು ಶುಲ್ಕ ಪಾವತಿ ಮಾಡಿ ವಿಧಾನಸೌಧ ವೀಕ್ಷಣೆಗೆ ಅವಕಾಶ ನೀಡಲಾಗಿದೆ.

ಪ್ರವಾಸೋದ್ಯಮ ಇಲಾಖೆಗೆ ಷರತ್ತುಬದ್ಧವಾಗಿ ಸರಕಾರ ಅನುಮತಿ ನೀಡಿದೆ. ಪ್ರವೇಶ ಶುಲ್ಕ ನೀಡಿ ಒಳಗೆ ಬರಲು ಆದೇಶವನ್ನೂ ಮಾಡಿರುವ ಸರಕಾರ, ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎನ್ನುವುದರ ಕುರಿತು ನಿರ್ಧಾರ ಮಾಡಿಲ್ಲ.
Comments are closed.