Home News Result: SSLC ರಿಸಲ್ಟ್ ಬಗ್ಗೆ ಇಲ್ಲಿದೆ ಅಪ್ಡೇಟ್!!

Result: SSLC ರಿಸಲ್ಟ್ ಬಗ್ಗೆ ಇಲ್ಲಿದೆ ಅಪ್ಡೇಟ್!!

Hindu neighbor gifts plot of land

Hindu neighbour gifts land to Muslim journalist

SSLC: ರಾಜ್ಯದಲ್ಲಿ 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿತ್ತು. ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ ಸುಸೂತ್ರವಾಗಿ ಪರೀಕ್ಷೆಗಳು ನಡೆದಿದ್ದು, ಇದೀಗ ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ.

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು SSLC ವಿದ್ಯಾರ್ಥಿಗಳಿಗೂ ಕೂಡ ತವಕವನ್ನು ಹೆಚ್ಚಿಸಿದೆ. ಅಂದಹಾಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಮೂಲಗಳ ಪ್ರಕಾರ ಇದೇ ಏಪ್ರಿಲ್ ತಿಂಗಳ ಅಂತ್ಯಕ್ಕೆ ಹಾಗೂ ಮೇ ಮೊದಲ ವಾರ ಬಿಡುಗಡೆ ಆಗುವ ಸಾಧ್ಯತೆ ಇದೆ.

ಫಲಿತಾಂಶ ಪರಿಶೀಲನೆ ಹೇಗೆ?
* ವಿದ್ಯಾರ್ಥಿಗಳು ಅಥವಾ ಪೋಷಕರು ಕರ್ನಾಟಕ SSLC ಪರೀಕ್ಷೆ ಫಲಿತಾಂಶ ನೋಡಲು ಈ ಕೆಳಗಿನ ಸೂಚನೆ ಪಾಲಿಸಬೇಕಿದೆ.
* ಮೊದಲು ನೀವು ಈ ಅಧಿಕೃತ ವೆಬ್‌ಸೈಟ್‌, ಲಿಂಕ್ https://karresults.nic.in/ ಗೆ ನೀಡಬೇಕು.
* ನಂತರ ಪರದೇಯಲ್ಲಿ ಕಾಣುವ ‘ಎಸ್.ಎಸ್.ಎಲ್.ಸಿ’ ಎಂಬ ಆಯ್ಕೆಯನ್ನು ಆಯ್ದುಕೊಳ್ಳಬೇಕು.
* 2025 ಪರೀಕ್ಷೆ -1 ರ ಫಲಿತಾಂಶ / SSLC 2025 ಪರೀಕ್ಷೆ – 1 ಫಲಿತಾಂಶ,’ ಎಂಬ ವಿಭಾಗದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಥವಾ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
* ಬಳಿಕ ಮುಂದಿನ ಪುಟಕ್ಕೆ ತೆರಳುತ್ತೀರಿ. ಅಲ್ಲಿ ನೀವು/ಪರೀಕ್ಷಾ ನೋಂದಣಿ ಸಂಖ್ಯೆ, ಮತ್ತು ಜನ್ಮ ದಿನಾಂಕದ ವಿವರ ಹಾಕಬೇಕು. ನಂತರ ಸಿಗುವ ತಾತ್ಕಾಲಿಕ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಡೌನ್‌ಲೋಡ್ ಆಗುತ್ತಿದೆ. ಅದರ ಒಂದು ಪ್ರತಿ ಪಡೆಯಬೇಕಿದೆ.