Belthangady: ಸಂತೆಕಟ್ಟೆ ಬಳಿ ಅಡಿಕೆ ಅಂಗಡಿ ನುಗ್ಗಿದ ಕಳ್ಳರು!

Belthangady: ಸಂತೆಕಟ್ಟೆ ಬಳಿ ಅಡಿಕೆ ಅಂಗಡಿಯ ಶಟರ್ ಮುರಿದು ಕಳ್ಳರು ಒಳಗೆ ನುಗ್ಗಿದ ಘಟನೆ ಎ.7 ರಂದು ಮಧ್ಯರಾತ್ರಿ ನಡೆದಿರುವ ಕುರಿತು ವರದಿಯಾಗಿದೆ.

ಬೆಳ್ತಂಗಡಿಯ ಸಂತೆಕಟ್ಟೆ ಬಳಿಯ ಸುಮುಖ ಟ್ರೇಡರ್ಸ್ ಸಂತೋಷ್ ಶೆಟ್ಟಿಯವರ ಅಡಿಕೆ ಅಂಗಡಿಗೆ ಮಧ್ಯರಾತ್ರಿ ಅಂಗಡಿಯ ಒಂದು ಬದಿಯ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ಅಂಗಡಿಯಲ್ಲಿದ್ದ ಹಣವನ್ನು ದೋಚಿ ಹೋಗಿದ್ದಾರೆ.
ಈ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಸ್ಥಳೀಯರು ಶಟರ್ ಮುರಿದಿರುವುದು ನೋಡಿ ಮಾಲಕರಿಗೆ ವಿಷಯ ತಿಳಿಸಿ, ನಂತರ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
Comments are closed.