ಪುತ್ತೂರು: ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಪಾದಯಾತ್ರೆ, ಪುತ್ತೂರಿನಿಂದ 3,000 ಮಂದಿ ಭಾಗಿ- ಸಂಜೀವ ಮಠಂದೂರು

ಪುತ್ತೂರು: ಕಾಮಗಾರಿಗಳ ಗುತ್ತಿಗೆಯನ್ನು ನೀಡುವ ಮೂಲಕ ಒಂದು ವರ್ಗದ ಓಲೈಕೆ ಮಾಡುತ್ತಿದ್ದು, ಹಿಂದೂ ವಿರೋಧಿ ನೀತಿ, ದ್ವೇಷದ ರಾಜಕಾರಣ ಮಾಡುತ್ತಿದೆ. ಗ್ಯಾರಂಟಿ ನೆಪದಲ್ಲಿ ರಾಜ್ಯ ಸರಕಾರ ಅಭಿವೃದ್ಧಿ ಮರೆತಿದೆ. ಇನ್ನೊಂದೆಡೆ ನೆಲ-ಜಲ ಎಲ್ಲವನ್ನೂ ಬಿಡದೆ ದರ ಏರಿಕೆ ಮೂಲಕ ಜನಸಾಮಾನ್ಯರನ್ನು ಲೂಟುತ್ತಿದೆ. ರಾಜ್ಯ ಸರಕಾರದ ಈ ತುಘಲಕ್ ಆಡಳಿತ, ಜನವಿರೋಧಿ ನೀತಿಯನ್ನು ಖಂಡಿಸಿ ಎ.9ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಲ್ಲಿ ಜನಾಕ್ರೋಶ ಪಾದಯಾತ್ರೆ ನಡೆಯಲಿದೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸುಮಾರು 3,000 ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಈಗಾಗಲೇ ಹಾಲಿನ ದರ 2 ವರ್ಷದಲ್ಲಿ ಮೂರು ಬಾರಿ ಹೆಚ್ಚಿಸಿ ಕಳೆದ 6 ತಿಂಗಳಿಂದ ಸುಮಾರು 600 ಕೋ. ರೂ. ಸಹಾಯಧನ ನೀಡದೆ ರೈತರನ್ನು ವಂಚಿತರನ್ನಾಗಿ ಮಾಡಿದೆ. ವಿದ್ಯುತ್ ದರ ಯುನಿಟ್ ಗೆ 36 ಪೈಸೆ ಹೆಚ್ಚಳವಾಗಿದೆ. ಬಸ್ ದರ 15 ರಿಂದ 20 ಶೇ., ಮೆಟ್ರೋ ಶೇ. 100 ಹೆಚ್ಚಳ ಡಿಸೇಲ್ ಬೆಲೆ 2% ಹೆಚ್ಚಳ, ಸ್ಮಾರ್ಟ್ ಮೀಟರ್ 750 ರಿಂದ 2500 ರೂ. ಹೆಚ್ಚಳ ಹೀಗೆ ಒಂದೆಡೆ ಕಬ್ಬಿಣದ ಚೂರಿಯಿಂದ ಇರಿಯುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪುರುಷೋತ್ತಮ ಮುಂಗ್ಲಿಮನೆ, ವಿರೂಪಾಕ್ಷ ಭಟ್ ಉಪಸ್ಥಿತರಿದ್ದರು.
Comments are closed.