

Boxer Mary Kom: ಬಾಕ್ಸರ್ ಮೇರಿಕೋಮ್ ವೈವಾಹಿಕ ಬಾಳು ವಿಚ್ಛೇದನತ್ತ ಸಾಗಿದೆ. ದಂಪತಿ ಬೇರೆ ಬೇರೆಯಾಗಿದ್ದಾರೆ ಅನ್ನುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಮೇರಿಕೋಮ್ ಹಾಗೂ ಪತಿ ಕೆ ಒನ್ಲರ್ ನಡುವೆ ಮನಸ್ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಇಬ್ಬರು ಬೇರೆ ಬೇರೆಯಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೇರಿಕೋಮ್ ತಮ್ಮ ನಾಲ್ವರು ಮಕ್ಕಳ ಜೊತೆ ಫರೀದಾಬಾದ್ಗೆ ಸ್ಥಳಾಂತರಗೊಂಡಿದ್ದು, ಪತಿ ಕೆ ಒನ್ಲರ್ ದೆಹಲಿಯಲ್ಲಿ ನೆಲೆಸಿದ್ದಾರೆ.
ಮೇರಿಕೋಮ್ ಪತಿ ರಾಜಕೀಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇದರು ಮೇರಿಕೋಮ್ ಇಷ್ಟಕ್ಕೆ ವಿರುದ್ಧವಾಗಿತ್ತು. ಮಣಿಪುರದ ರಾಜಕೀಯ ಸ್ಥಿತಿಗತಿ ಸೂಕ್ತವಲ್ಲ. ನಮಗೆ ರಾಜಕೀಯ ಬೇಡ, ನಮಗೆ ಒಗ್ಗುವುದಿಲ್ಲ. ಆರ್ಥಿಕ ಸಮಸ್ಯೆ ಉಂಟಾಗಲಿದೆ ಎಂದು ಮೇರಿಕೋಮ್ ಸೂಚಿಸಿದ್ದರು. ಆದರೆ ಪತಿ ಈ ಮಾತನ್ನು ಧಿಕ್ಕರಿಸಿ ಮಣಿಪುರ ವಿಧಾನಸಭೆ ಚುನಾವಣೆಗೆ ನಿಂತು ಸೋಲು ಕಂಡಿದ್ದು, ಎರಡರಿಂದ ಮೂರು ಕೋಟಿ ನಷ್ಟ ಉಂಟು ಮಾಡಿದ್ದರು.
ನಂತರ ಮೇರಿಕೋಮ್ ಬಾಳಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿದ್ದು, ಪತಿ ರಾಜಕೀಯ ಜೀವನಕ್ಕೆ ಹೆಚ್ಚು ಸಮಯ ನೀಡುತ್ತಿದ್ದರು. ಕುಟುಂಬ ಮಕ್ಕಳಿಗೆಂದು ಸಮಯ ನೀಡುತ್ತಿರಲಿಲ್ಲ. ಇದು ಮೇರಿಕೋಮ್ ಅಸಮಾಧಾನಕ್ಕೆ ಕಾರಣವಾಗಿತ್ತು.
ಡಿವೋರ್ಸ್ಗೆ ಇನ್ನೂ ಅಧಿಕೃತವಾಗಿ ಅರ್ಜಿ ಸಲ್ಲಿಸಿಲ್ಲ. ಕಾನೂನು ರೀತಿಯ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ.













