Theft: ಪ್ರೇಯಸಿ ಮೇಲಿನ ಕೋಪಕ್ಕೆ ಕೋಳಿ ಕದ್ದ ಭೂಪ!! ಮುಂದೇನಾಯ್ತು?

Theft: ತಾನು ಪ್ರೀತಿಸುವ ಹುಡುಗಿ ಮೇಲಿನ ದ್ವೇಷಕ್ಕಾಗಿ ಪಾಗಲ್ ಪ್ರೇಮಿಯೊಬ್ಬ ಆಕೆಯ ಮನೆಯ ಕೋಳಿಯನ್ನು ಕದ್ದು ಸಿಕ್ಕಿಬಿದ್ದಿರುವ ವಿಚಿತ್ರ ಪ್ರಕರಣ ಅಮೇರಿಕಾದಲ್ಲಿ ಬೆಳಕಿಗೆ ಬಂದಿದೆ.

ಮಾಜಿ ಪ್ರಿಯಕರ ಹಿತ್ತಿಲ ಬಾಗಿಲನ್ನು ಒದ್ದು ಕೋಳಿಯನ್ನು ಕದ್ದುಕೊಂಡು ಹೋಗಿದ್ದ ಎಂದು ಮಹಿಳೆ ನೀಡಿದ್ದ ದೂರಿನ ಮೇರೆಗೆ ಅಮೆರಿಕದ ವಾಷಿಂಗ್ಟನ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಕೋಳಿಯನ್ನು ಕದ್ದೊಯ್ದ ಪ್ರಿಯಕರ ಓಡಿಹೋಗಿದ್ದು, ಪ್ರೇಯಸಿ ನೀಡಿದ್ದ ದೂರಿನ ಮೇರೆಗೆ ಹುಡುಕಾಡಿದ ಪೊಲೀಸರಿಗೆ ಅಲ್ಲಿನ ಪೊದೆಗಳ ಮಧ್ಯೆ ಕೋಳಿಯೊಂದಿಗಿದ್ದ ವ್ಯಕ್ತಿ ಕಾಣಿಸಿಕೊಂಡಿದ್ದ. ಪೊಲೀಸರ ಸೂಚನೆ ಮೇರೆಗೆ ಗಸ್ತುವಾಹನದಲ್ಲಿ ಆತ ಕೋಳಿಯನ್ನು ಇಟ್ಟಿದ್ದು, ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.
Comments are closed.