America: 100 ವರ್ಷದಷ್ಟು ಹಳೆಯ ಸಮಾಧಿ ಮೇಲೆ ಹೋಗಿ ಲೈಂಗಿಕ ಕ್ರಿಯೆ – ಜೋಡಿ ಅರೆಸ್ಟ್

America : ಅಮೇರಿಕಾದ ಸ್ಮಶಾನ ಬಂದರಲ್ಲಿರುವ ಸುಮಾರು ನೂರು ವರ್ಷದಷ್ಟು ಹಳೆಯದಾದ ಸಮಾಧಿ ಮೇಲೆ ಹೋಗಿ ಜೋಡಿಯೊಂದು ಲೈಂಗಿಕ ಕ್ರಿಯೆ ನಡೆಸಿ ಪೊಲೀಸರಿಗೆ ತಗಲಾಕಿಕೊಂಡ ಘಟನೆ ನಡೆದಿದೆ. ಈ ಘಟನೆ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ.

ಹೌದು, ಅಮೆರಿಕದ ಫ್ಲೋರಿಡಾದಲ್ಲಿ ಜೋಸೆಫ್ ಲ್ಯೂಕ್ ಬ್ರೌನ್ ಮತ್ತು ಸ್ಟೆಫಾನಿ ಕೆ ವೇಗ್‌ಮನ್ ಎಂಬ ದಂಪತಿ ನೂರು ವರ್ಷಗಳಿಗೂ ಹಳೆಯದಾದ ಐತಿಹಾಸಿಕ ಸ್ಮಶಾನದೊಳಗೆ ನುಗ್ಗಿ ಸಮಾಧಿಯ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ವರದಿಗಳ ಪ್ರಕಾರ, ಈ ಜೋಡಿ ತಮ್ಮ ಬಿಳಿ ನಿಸ್ಸಾನ್ ಕಾರನ್ನು ಸ್ಮಶಾನದ ಹೊರಗಿನ ಗೇಟ್ ಬಳಿ ನಿಲ್ಲಿಸಿ, ಒಳಗೆ ಅಕ್ರಮವಾಗಿ ಪ್ರವೇಶಿಸಿ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಹೋಗಿದ್ದರು. ಮಾರ್ಚ್ 26 ರಂದು ಈ ಕೃತ್ಯ ನಡೆದಿದ್ದು, ಗಸ್ತು ತಿರುಗುತ್ತಿದ್ದ ಪೊಲೀಸರೊಬ್ಬರು ಕಿಟಕಿ ತೆರೆದಿದ್ದ ಅನುಮಾನಾಸ್ಪದ ಕಾರನ್ನು ಗಮನಿಸಿ ಪರಿಶೀಲಿಸಿದಾಗ ಈ ಅಸಹ್ಯ ಘಟನೆ ಬೆಳಕಿಗೆ ಬಂದಿದೆ. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ಲದೆ ಅವರ ಕಾರನ್ನು ಪರಿಶೀಲಿಸಿದಾಗ ಮೆಥಾಂಫೆಟಮೈನ್, ಕ್ಸಾನಾಕ್ಸ್ ಮತ್ತು ಆಕ್ಸಿಕೊಡೋನ್ ಎಂಬ ಮಾದಕ ದ್ರವ್ಯಗಳು ಪತ್ತೆಯಾಗಿವೆ. ಹೀಗಾಗಿ, ಇಬ್ಬರನ್ನೂ ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೂ ಬಂಧಿಸಲಾಗಿದೆ. ವೇಗ್‌ಮನ್ ಅವರನ್ನು ಈಗಾಗಲೇ ಜೈಲಿಗೆ ಕಳುಹಿಸಲಾಗಿದ್ದು, ಗಾಯಗೊಂಡಿದ್ದ ಬ್ರೌನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Comments are closed.