Social media: ಈ ರೀತಿ ಮೇಕಪ್ ಮಾಡಿ ರಜೆ ಪಡೆಯಿರಿ ಎಂದ ಮಹಿಳೆ! ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

Share the Article

Social media: ಪುಣೆಯಲ್ಲೊಬ್ಬ ಮಹಿಳೆ ರಜೆಗಾಗಿ ಮಡಿದ ಮೇಕ್ಅಪ್ ವಿನೂತನ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗಿದೆ.

ಪುಣೆಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯೊಬ್ಬರು, ಮುಖದ ಮೇಲೆ ನಕಲಿ ಅಪಘಾತದ ಗಾಯದಂತೆ ಮೇಕಪ್ ಮಾಡಿ, ಅದನ್ನು ಗುರುತಿಸಲು ಹೊಲಿಗೆ ಹಾಕಿದ ರೀತಿಯಲ್ಲಿ ತೋರಿಸಿ ರಜೆಗಾಗಿ ತಯಾರಾದ ರೀತಿಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಈ ಮೇಕಪ್ ಕೌಶಲ್ಯದಲ್ಲಿ, ಗಾಯ ತೀವ್ರವಾದಂತೆ ಕಾಣುವ ಮತ್ತು ಗುಣಮುಖವಾಗುತ್ತಿರುವ ಹಂತಗಳನ್ನು ಬಹಳ ನೈಜವಾಗಿ ರೂಪಿಸಿರುವುದು ಗಮನ ಸೆಳೆಯುತ್ತಿದೆ. ಈ ಮಹಿಳೆ ಅದನ್ನು ಅಪಘಾತದ ನಟನೆಯಾಗಿ ಬಳಸಿದ ವಿಧಾನದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್‌ಗಳೊಂದಿಗೆ ಟ್ರೆಂಡ್ ಆಗುತ್ತಿದೆ.

Comments are closed.