Home News Belthangady : ತಾವೇ ಬೆಳೆದ ತರಕಾರಿಗಳನ್ನು ಸಿಎಂ ಸಿದ್ದರಾಮಯ್ಯಗೆ ನೀಡಿ ಸಂಭ್ರಮಿಸಿದ ಬೆಳ್ತಂಗಡಿ ಶಾಲಾ ವಿದ್ಯಾರ್ಥಿಗಳು...

Belthangady : ತಾವೇ ಬೆಳೆದ ತರಕಾರಿಗಳನ್ನು ಸಿಎಂ ಸಿದ್ದರಾಮಯ್ಯಗೆ ನೀಡಿ ಸಂಭ್ರಮಿಸಿದ ಬೆಳ್ತಂಗಡಿ ಶಾಲಾ ವಿದ್ಯಾರ್ಥಿಗಳು !!

Hindu neighbor gifts plot of land

Hindu neighbour gifts land to Muslim journalist

Belthangady :ಕೃಷಿಯನ್ನು ಕೂಡ ಜೀವನದ ಒಂದು ಭಾಗವನ್ನಾಗಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಬೆಳ್ತಂಗಡಿಯ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯೊಂದಿಗೆ ಕೃಷಿ ಚಟುವಟಿಕೆಗಳನ್ನು ಕೂಡ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಆವರಣದಲ್ಲಿ ಕೃಷಿ ನಡೆಸಿದ್ದರು. ಇದೀಗ ಈ ಶಾಲೆಯ ವಿದ್ಯಾರ್ಥಿಗಳು ತಾವು ಬೆಳೆದ ಹಣ್ಣು ಹಂಪಲು ತರಕಾರಿಗಳನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ.

ಹೌದು, ಬೆಂಗಳೂರಿನ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಭೇಟಿಯಾದ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆಯ ಮಕ್ಕಳು ಶಾಲಾ ಆವರಣದಲ್ಲಿ ಬೆಳೆಸಿದ ಹಣ್ಣು ತರಕಾರಿಗಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿ ಸಂತಸಪಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯಾರ್ಥಿಗಳು ಬೆಳೆದ ತರಕಾರಿ, ವಿವಿಧ ಹಣ್ಣು ಹಂಪಲು ಹಾಗೂ ಜೇನು ಕೃಷಿಯ ಬಗ್ಗೆ ಮಾಹಿತಿ ಪಡೆದು ಮಕ್ಕಳ ಕಾರ್ಯವನ್ನು ಶ್ಲಾಘಿಸಿ ಸರಕಾರಿ ಶಾಲೆಗೆ ಎರಡು ಕಂಪ್ಯೂಟರ್‌ಗಳ ಉಡುಗೊರೆಯಾಗಿ ಈ ಸಂದರ್ಭದಲ್ಲಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಮಾಧ್ಯಮ ವರ್ಗದವರು ಉಪಸ್ಥಿತರಿದ್ದರು.