Home News Bengaluru: ಬಾಣಂತಿಯರ ಸರಣಿ ಸಾವಿನ ಪ್ರಕರಣ: ಡೆತ್ ಆಡಿಟ್ ರಿಪೋರ್ಟ್ ರಿಲೀಸ್ ಮಾಡಿದ ಗುಂಡೂರಾವ್‌

Bengaluru: ಬಾಣಂತಿಯರ ಸರಣಿ ಸಾವಿನ ಪ್ರಕರಣ: ಡೆತ್ ಆಡಿಟ್ ರಿಪೋರ್ಟ್ ರಿಲೀಸ್ ಮಾಡಿದ ಗುಂಡೂರಾವ್‌

Hindu neighbor gifts plot of land

Hindu neighbour gifts land to Muslim journalist

Bengaluru: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರಲ್ಲಿ (Bengaluru) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತಮಾಡಿದ್ದು ಡೇತ್ ಆಡಿಟ್ ರಿಪೋರ್ಟ್‌ ರಿಲೀಸ್‌ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು ಬಾಣಂತಿಯರ ಸರಣಿ ಸಾವಿನ ಬಗ್ಗೆ ಟೆಕ್ನಿಕಲ್ ಕಮಿಟಿ ರಚನೆಯಾಗಿತ್ತು. ಈಗ ಆ ಕಮಿಟಿ ನೀಡಿರುವ ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಈ ವರದಿಯ ಅಂಶಗಳಿಂದ ತಿಳಿಯುವುದೆಂದರೆ, ನಮ್ಮ ಬಳಿ ಅಗತ್ಯ ಔಷದ ಸಲಕರಣೆ ಮತ್ತು ವೈದ್ಯರು ಇದ್ದಿದ್ದರೆ ಶೇ 70 ಬಾಣಂತಿಯರ ಸಾವುಗಳನ್ನು ತಡೆಯಬಹುದಿತ್ತು ಎಂದಿದ್ದಾರೆ. ಇನ್ನು ರಿಂಗರ್ ಲ್ಯಾಕ್ವೆಕ್ ಸಮಸ್ಯೆಯಿಂದ 18 ಬಾಣಂತಿಯರ ಸಾವು ಸಂಭವಿಸಿದೆ. ಫ್ರೆಶ್ ಪ್ರೋಜನ್ ಪ್ಲಾಸ್ಮಾ ಇದ್ದಿದ್ದರೆ ಸಾವಿನ ಸಂಖ್ಯೆ ಕಡಿಮೆಯಾಗುತ್ತಿತ್ತು. ಹೀಗಾಗಿ ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ .

ರಾಜ್ಯದಲ್ಲಿ ಬಳ್ಳಾರಿ ಸೇರಿದಂತೆ 13 ಕಡೆಗಳಲ್ಲಿ ಈ ರೀತಿಯ ಪ್ರಕರಣಗಳು ಗಮನಕ್ಕೆ ಬಂದಿದ್ದು ಈಗಾಗಲೇ ನಿರ್ಲಕ್ಷ ವಹಿಸಿದ ಸುಮಾರು 10 ವೈದ್ಯರಿಗೆ ನೋಟಿಸ್‌ ನೀಡಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.