Home News Mangaluru : ಗುಡ್ಡಕ್ಕೆ ಹತ್ತಿದ ಬೆಂಕಿ – ಹೊಗೆ ಆವರಿಸಿ ಎರಡು ಬಸ್ ಗಳು ಡಿಕ್ಕಿ!!

Mangaluru : ಗುಡ್ಡಕ್ಕೆ ಹತ್ತಿದ ಬೆಂಕಿ – ಹೊಗೆ ಆವರಿಸಿ ಎರಡು ಬಸ್ ಗಳು ಡಿಕ್ಕಿ!!

Hindu neighbor gifts plot of land

Hindu neighbour gifts land to Muslim journalist

ಗುಡ್ಡಕ್ಕೆ ಬೆಂಕಿ ಬಿದ್ದು ರಸ್ತೆಯಲ್ಲೆಲ್ಲಾ ದಟ್ಟವಾದ ಹೊಗೆ ಆವರಿಸಿದ ಪರಿಣಾಮ ಎರಡು ಬಸ್ಗಳು ಮುಖಾಮುಖಿ ಡಿಕ್ಕಿ ಆದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ವಸತಿ ನಿಲಯದ ಬಳಿ ಗುರುವಾರ ಕೊಣಾಜೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ ಹಾಗೂ ಇನೋಳಿಗೆ ತೆರಳುವ ಬಿಐಟಿ ಕಾಲೇಜಿನ ಬಸ್‌ ಢಿಕ್ಕಿಯಾದ ಪರಿಣಾಮ ಎರಡೂ ಬಸ್ಸುಗಳ ಚಾಲಕರು ಹಾಗೂ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ವಿವಿ ಸಮೀಪದ ರಸ್ತೆ ಬದಿಯ ಗುಡ್ಡಕ್ಕೆ ಬೆಂಕಿ ಬಿದ್ದಿದ್ದು, ಗಿಡಮರಗಳು ಬೆಂಕಿಗಾಹುತಿಯಾಗಿವೆ. ಹೊಗೆ ತುಂಬಿದ್ದರಿಂದ ರಸ್ತೆಯಲ್ಲಿ ಸಂಚರಿಸುತ್ತಿದ್ದವರಿಗೆ ತೀವ್ರ ಸಮಸ್ಯೆಯಾಯಿತು. ಅಗ್ನಿಶಾಮಕ ದಳದ ಸಿಬಂದಿ ಆಗಮಿಸಿ ಬೆಂಕಿಯನ್ನು ನಂದಿಸಲು ಶ್ರಮಿಸಿದ್ದಾರೆ.