Home News CM Office : ಸಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 30 ಸಿಬ್ಬಂದಿಗಳನ್ನು ದಿಢೀರ್ ವಜಾ ಮಾಡಿದ...

CM Office : ಸಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 30 ಸಿಬ್ಬಂದಿಗಳನ್ನು ದಿಢೀರ್ ವಜಾ ಮಾಡಿದ ಸರ್ಕಾರ!!

Hindu neighbor gifts plot of land

Hindu neighbour gifts land to Muslim journalist

CM Office : ಕರ್ನಾಟಕದ ಸರ್ಕಾರದ (Karnataka Government) ಸಿಎಂ ಸಚಿವಾಲಯದ 30 ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ. ನಿನ್ನೆ ಅಪರಾಹ್ನದಿಂದಲೇ ಕರ್ತವ್ಯದಿಂದ 30 ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಗಿದೆ.

ಹೌದು, ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸ್ತಿದ್ದ 30 ಸಿಬ್ಬಂದಿಯನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ. ಹೀಗಾಗಿ ಸರ್ಕಾರದ ಸಹಾಯಕರು, ಕಿರಿಯ ಸಹಾಯಕರು ದಲಾಯತ್ ಹುದ್ದೆಯಲ್ಲಿದ್ದವರು ಸೇವೆಯಿಂದ ವಜಾಗೊಂಡಿದ್ದಾರೆ.

ಈ ಬಗ್ಗೆ ಸಿಎಂ ಸಚಿವಾಲಯದಿಂದ ಆದೇಶ ಹೊರಡಿಸಲಾಗಿದೆ. 30 ಗುತ್ತಿಗೆ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದ್ದು, ಅವರ ಸೇವೆ ಅವಶ್ಯಕತೆ ಇಲ್ಲದ ಕಾರಣ ಕರ್ತವ್ಯದಿಂದ ಏಕಾಏಕಿ ತೆಗೆದುಹಾಕಲಾಗಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 30 ಸಿಬ್ಬಂದಿಗೆ ಇಂದು ಮಧ್ಯಾಹ್ನದಿಂದಲೇ ಕೆಲಸಕ್ಕೆ ಬಾರದಂತೆ ಸೂಚಿಸಲಾಗಿದೆ.