Jaipur: ಮಸೀದಿಯಿಂದ ಹೊರ ಬಂದ ಮುಸ್ಲಿಮರ ಮೇಲೆ ಹಿಂದೂಗಳಿಂದ ಪುಷ್ಪಾರ್ಚನೆ

Jaipur: ನಿನ್ನೆ ದಿನ ಇಡೀ ದೇಶದ ಮುಸ್ಲಿಂ ಬಾಂಧವರು ಈದ್-ಅಲ್-ಫಿತರ್ ಅನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಮಸೀದಿಗಳಿಗೆ ತೆರಳಿ ತಮ್ಮ ಇಷ್ಟಾರ್ಥಗಳನ್ನು ಪ್ರಾರ್ಥಿಸಿದ್ದಾರೆ. ಈ ಹಬ್ಬದ ದಿನದಂದು ರಾಜಸ್ಥಾನದ ಜೈಪುರದಲ್ಲಿ ಹಿಂದೂ ಮುಸ್ಲಿಮರು ಭಾವೈಕ್ಯತೆಯನ್ನು ಮೆರೆದ ಒಂದು ಸುಸಂದರ್ಭ ಬೆಳಕೆಗೆ ಬಂದಿದೆ.

ರಾಜಸ್ಥಾನದ ಜೈಪುರದಲ್ಲಿ, ಜಾಮಾ ಮಸೀದಿ ಮತ್ತು ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಮುಸ್ಲಿಮರು ಹೊರ ಬರುತ್ತಿರುವ ವೇಳೆ ಹಿಂದುಗಳು ಅವರ ಮೇಲೆ ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿದ್ದಾರೆ. ಈ ಸುಂದರ ಗಳಿಗೆ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ.

ಮುಖ್ಯ ಖಾಜಿ ಖಾಲಿದ್ ಉಸ್ಮಾನಿ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು ಮತ್ತು ಸ್ಥಳೀಯ ಹಿಂದೂ ಸಮುದಾಯದ ಸದಸ್ಯರು ಹೂವುಗಳನ್ನು ಸುರಿಯುವ ಮೂಲಕ ಶುಭಾಶಯ ಕೋರಿದರು. ಪ್ರಾರ್ಥನೆಯ ನಂತರ, ಜನರು ಪರಸ್ಪರ ಅಪ್ಪಿಕೊಂಡು ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

Comments are closed.