Home News PM Modi: ಮೋದಿ ಆಪ್ತ ಕಾರ್ಯದರ್ಶಿಯಾಗಿ ಯುವ IFS ಅಧಿಕಾರಿ ನಿಧಿ ತಿವಾರಿ ನೇಮಕ!!

PM Modi: ಮೋದಿ ಆಪ್ತ ಕಾರ್ಯದರ್ಶಿಯಾಗಿ ಯುವ IFS ಅಧಿಕಾರಿ ನಿಧಿ ತಿವಾರಿ ನೇಮಕ!!

Hindu neighbor gifts plot of land

Hindu neighbour gifts land to Muslim journalist

PM Modi: ಯುವ ಐಎಫ್‌ಎಸ್ (IFS) ಅಧಿಕಾರಿ ನಿಧಿ ತಿವಾರಿ (Nidhi Tewari) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಉತ್ತರ ಪ್ರದೇಶದ ಮೂಲದವರಾದ ನಿಧಿ ತಿವಾರಿ ಅವರು 2014ನೇ ಬ್ಯಾಚ್‌ನ ಇಂಡಿಯನ್ ಫಾರಿನ್ ಸರ್ವಿಸ್ ಅಧಿಕಾರಿಯಾಗಿದ್ದಾರೆ. ನಿಧಿ ತಿವಾರಿ ಅವರನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ತಕ್ಷಣದಿಂದ ಜಾರಿಗೆ ಬರುವಂತೆ ನೇಮಕಾತಿಯನ್ನು ಅನುಮೋದಿಸಿದೆ.

ಅಂದಹಾಗೆ ನಿಧಿ ಅವರಿಗೆ 2016ರಲ್ಲಿ ಅತ್ಯುತ್ತಮ ತರಬೇತಿ ಅಧಿಕಾರಿ ಮತ್ತು ಪ್ರಬಂಧಕ್ಕೆ ರಾಯಭಾರಿ ಬಿಮಲ್ ಸನ್ಯಾಲ್ ಸ್ಮಾರಕ ಪದಕವನ್ನು (Ambassador Bimal Sanyal Memorial Medal) ನೀಡಿ ಪುರಸ್ಕರಿಸಲಾಗಿತ್ತು. ತಿವಾರಿ ಅವರು ಜನವರಿ 6, 2023 ರಿಂದ ಪ್ರಧಾನ ಮಂತ್ರಿ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 2022ರಲ್ಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಸೇರ್ಪಡೆಯಾದರು.

ಕಳೆದ ಎರಡು ವರ್ಷಗಳಿಂದ ನಿಧಿ ತಿವಾರಿ ಅವರು ಪ್ರಧಾನ ಮಂತ್ರಿ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಅವರನ್ನು ಪ್ರಧಾನಿ ನರೇಂದ್ರ ಮೋದಿಯವ ಖಾಸಗಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.