Maharastra: ದುಬಾರಿ ಮಹೀಂದ್ರ ಕಾರಿಗೆ ಸಗಣಿ ಲೇಪನ ಮಾಡಿಸಿದ ಡಾಕ್ಟರ್ – ಅಚ್ಚರಿ ಉಂಟುಮಾಡುತ್ತೆ ಕಾರಣ

Maharashtra : ತನ್ನ ಫೀಚರ್ಸ್‌ನಿಂದಲೇ ಗ್ರಾಹಕರನ್ನು ಸೆಳೆಯುತ್ತಿರುವ ಮಹೀಂದ್ರಾ ಕಾರಿಗೆ ಇದೀಗ ವೈದ್ಯರೊಬ್ಬರು ಸಗಣಿಯನ್ನು ಲೇಪನ ಮಾಡಿಸಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೌದು, ಮಹಾರಾಷ್ಟ್ರದ ಪಂಢರಪುರದ ಆಯುರ್ವೇದ ವೈದ್ಯರೊಬ್ಬರು ಸುಮಾರು 15 ಲಕ್ಷ ರೂಪಾಯಿ ಬೆಲೆ ಬಾಳುವ ಮಹೀಂದ್ರಾ ಎಕ್ಸ್‌ಯುವಿ 300 ಕಾರನ್ನು ಸಗಣಿಯಿಂದ ಅಲಂಕಾರ ಮಾಡಿ ಗಮನ ಸೆಳೆದಿದ್ದಾರೆ. ಇದು ಮೊದಲಿಗೆ ನೋಡಿದರೆ ಕಂಪನಿಯವರು ಯಾವುದೋ ಹೊಸ ಕಲರ್‌ ಲಾಂಚ್‌ ಮಾಡಿದ್ದಾರೇನೋ ಎನ್ನುವಂತಿದೆ. ಆದರೆ ಸಗಣಿ ಮೆತ್ತುವ ಸಾಹಸ ಮಾಡಿದ್ದಾದರೂ ಏಕೆ?

ಸದ್ಯ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗೂ ಮೀರಿದೆ. ಇದರಿಂದ ಬಿಸಿಲು ಕೂಡ ಹೆಚ್ಚಾಗುತ್ತಿದೆ. ಹಾಗಾಗಿ ತಮ್ಮ ಕಾರನ್ನು ಕೂಲ್‌ ಆಗಿಡಬೇಕು ಎಂಬ ಉದ್ದೇಶದಿಂದ ಸಗಣಿ ಕೋಟಿಂಗ್‌ ಮಾಡಿಸಿರುವುದಾಗಿ ಹೇಳಿಕೊಂಡಿದ್ದಾರೆ. ಹಸುವಿನ ಸಗಣಿ ಮತ್ತು ಹಸುವಿನ ಮೂತ್ರದಿಂದ ಮಿಶ್ರಣ ಮಾಡಿ ಇದನ್ನು ಕಾರಿಗೆ ಲೇಪಿಸಿದ್ದಾರೆ. ಇದರ ಬಳಿಕ ಕಾರಿನ ತಾಪಮಾನ ಅರ್ಧಕ್ಕಿಂತಲೂ ಕಡಿಮೆಯಾಗಿದೆ ಎಂದು ವೈದ್ಯರು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಅಲ್ಲದೆ ಸಗಣಿಗೆ ಗೋಮೂತ್ರ ಮಿಕ್ಸ್‌ ಮಾಡಿ, ಅದನ್ನು ಪೇಸ್ಟ್‌ ಮಾದರಿ ಕಲೆಸಿ ಪೂರ್ತಿ ಕಾರಿಗೆ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ ಹಸುವಿನ ಸಗಣಿ ಹಚ್ಚುವುದರಿಂದ ಕಾರಿನ ಬಣ್ಣ ಕೂಡ ಮಾಸೋದಿಲ್ಲ. ಸೂರ್ಯನ ಶಾಖದಿಂದಲೂ ಕಾರನ್ನು ರಕ್ಷಿಸಬಹುದು ಎಂದು ಕಾರಣ ನೀಡಿದ್ದಾರೆ

Comments are closed.