Accident: ಅಂಡಿಂಜೆ: ಬೈಕ್‌ ಅಪಘಾತ: ಮಂಗಳಾದೇವಿ ಮೇಳದ ಭಾಗವತ ಸತೀಶ್ ಆಚಾರ್ಯ ಮೃತ್ಯು

Share the Article

Accident: ಮಂಗಳಾದೇವಿ ಯಕ್ಷಗಾನ ಮೇಳದ ಪ್ರಸಿದ್ಧ ಭಾಗವತರಾದ ಸತೀಶ್ ಆಚಾರ್ಯ(40) ಇಂದು ಮುಂಜಾನೆ 4 ಗಂಟೆಗೆ ನಡೆದ ರಸ್ತೆ ಅಪಘಡದಲ್ಲಿ (Accident) ದುರ್ಮರಣಕ್ಕೀಡಾಗಿದ್ದಾರೆ.

ಸುಳ್ಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮ ಮುಗಿಸಿ, ಮುಂಜಾನೆ 4 ಗಂಟೆಗೆ ತಮ್ಮ ಬೈಕ್‌ನಲ್ಲಿ ನಾರಾವಿಯಿಂದ ಅಂಡಿಂಜೆಗೆ ಬರುತ್ತಿದ್ದ ಸಂದರ್ಭದಲ್ಲಿ ಅಂಡಿಂಜೆ ಕಿಲಾರ ಮಾರಿಕಾಂಭ ದೇವಸ್ಥಾನದ ಸಮೀಪದ ತಿರುವು ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಗೊಂಡ ಸತೀಶ್ ಆಚಾರ್ಯ ಅವರು ಸ್ಥಳದಲ್ಲೆ ಸಾವನ್ನಪ್ಪಿದರು.

Comments are closed.