Mangaluru: ಮಂಗಳೂರು: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಪತ್ತೆ: ಇಬ್ಬರ ಬಂಧನ

Share the Article

Mangaluru: ಮಂಗಳೂರು (Mangaluru) ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಹೈಡ್ರೋವೀಡ್ ಗಾಂಜಾ, ಚರಸ್ ಹಾಗೂ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಯುವಕರಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳನ್ನು ಪಾಂಡೇಶ್ವರ ಸುಭಾಷ್ ನಗರ ನಿವಾಸಿ ತೈಸಿರ್ ಇಸ್ಮಾಯಿಲ್ ಹುಸೈನ್(23), ಬೋಳಂಗಡಿ ಹೌಸ್ ಬಂಟ್ವಾಳ, ಪಾಣೆ ಮಂಗಳೂರು ನಿವಾಸಿ ರೋಯಸ್ಟನ್ ಕ್ಸವಿಯರ್ ಲೋಬೋ(22) ಎಂದು ಗುರುತಿಸಲಾಗಿದೆ.

ಅರೋಪಿಗಳಿಂದ ಸುಮಾರು 9 ಲಕ್ಷ ಮೌಲ್ಯದ ಹೈಡ್ರೋವಿಡ್ ಗಾಂಜಾ, ಚರಸ್, ಗಾಂಜಾ ಹಾಗೂ 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Comments are closed.