Home News Bagar Hukum: ಅರ್ಹರಿಗೆ 6 ತಿಂಗಳಲ್ಲಿ ಜಮೀನು ಮಂಜೂರು !!

Bagar Hukum: ಅರ್ಹರಿಗೆ 6 ತಿಂಗಳಲ್ಲಿ ಜಮೀನು ಮಂಜೂರು !!

Hindu neighbor gifts plot of land

Hindu neighbour gifts land to Muslim journalist

Bagar Hukum: ಬಗರ್ ಹುಕುಂ ಯೋಜನೆ ಅಡಿ ಆಸ್ತಿ ಮಂಜೂರಿಗೆ ಅರ್ಜಿ ಸಲ್ಲಿಸಿದ ರೈತರಿಗೆ ಸಚಿವ ಕೃಷ್ಣಭೈರೇಗೌಡ ಅವರು ಸಿಹಿ ಸುದ್ದಿ ನೀಡಿದ್ದಾರೆ. ಯಸ್, ಇನ್ನು ಆರು ತಿಂಗಳಲ್ಲಿ ಅರ್ಹರಿಗೆ ಜಮೀನು ಮಂಜೂರು ಮಾಡಲು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

ಹೌದು, ಆರು ತಿಂಗಳಲ್ಲಿ ಎಲ್ಲಾ ಅರ್ಹರಿಗೆ ಜಮೀನು ಮಂಜೂರು ಮಾಡಬೇಕು ಎಂದು ತಹಶೀಲ್ದಾರ್ ಗಳಿಗೆ ಸೂಚನೆ ನೀಡಿದ್ದಾರೆ. ಶುಕ್ರವಾರ ತಹಶಿಲ್ದಾರ್ ಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಬಗರ್ ಹುಕುಂ ಬಡವರ ಕೆಲಸವೆಂದು ಕೆಲವು ಅಧಿಕಾರಿಗಳು ಅಸಡ್ಡೆ ತೋರಿಸುತ್ತಿದ್ದಾರೆ. 15 ದಿನಗಳಿಗೊಮ್ಮೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಅರ್ಹರಿಗೆ ಜಮೀನು ಮಂಜೂರು ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಇಷ್ಟೇ ಅಲ್ಲದೆ ತಮ್ಮ ಪಾಲಿನ ಜಮೀನು ಇದ್ದರೂ ಫೋಡಿಯಾಗದೆ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ತಹಶೀಲ್ದಾರರು ನಿಗದಿತ ಜಮೀನಿಗೆ ಸಂಬಂಧಿಸಿದ ದಾಖಲೆಯನ್ನು ಸಿದ್ಧಪಡಿಸಿ ಮುಂದಿನ ಹಂತದ ನಮೂನೆಗೆ ಭೂಮಾನ ಇಲಾಖೆಗೆ ಕಡತ ಕಳಿಸಬೇಕು ಎಂದು ಹೇಳಿದ್ದಾರೆ.