of your HTML document.

Vijayapura: ಯತ್ನಾಳ್ ಉಚ್ಚಾಟನೆಯಿಂದ ಮನನೊಂದಿದ್ದ ಅಭಿಮಾನಿ ಸಾವು!!

Vijayapura : ಬಿಜೆಪಿ ನಾಯಕ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ಬಿಜೆಪಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಯತ್ನಾಳ್ ಉಚ್ಚಾಟನೆಯಿಂದ ಮನನೊಂದಿದ್ದ ಅಭಿಮಾನಿ ಒಬ್ಬರು ಸಾವನ್ನಪ್ಪಿದ್ದಾರೆ.

ಯತ್ನಾಳ್ ತವರು ಜಿಲ್ಲೆ ವಿಜಯಪುರದಲ್ಲಿ ಹಲವಾರು ಬೆಂಬಲಿಗರು ರಾಜೀನಾಮೆ ನೀಡಿ ಬಿಜೆಪಿ ನಡೆಗೆ ಕಿಡಿಕಾರಿದರು. ಇನ್ನೂ ತಮ್ಮ ನಾಯಕನಿಗೆ ಇಂಥ ಪರಿಸ್ಥಿತಿ ಬಂತಲ್ಲ ಎಂದು ದುಃಖ ಹೊರಹಾಕಿದರು. ಇದೀಗ ಯತ್ನಾಳ್ ರಾಜೀನಾಮೆಯಿಂದ ಮನನೊಂದಿದ್ದ ಅಭಿಮಾನಿ, ವಿಜಯಪುರ ಬಿಜೆಪಿ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಸಂತೋಷ್ ತಟಗಾರ ಎಂಬುವವರು ಕಾರು ಅಪಘಾತದಲ್ಲಿ , ಮೃತಪಟ್ಟಿದ್ದಾರೆ.

ಯತ್ನಾಳ್ ಉಚ್ಚಾನೆಯಿಂದ ಮನನೊಂದಿದ್ದ ಸಂತೋಷ್ ತಟಗಾರ ನಿನ್ನೆಯಷ್ಟೇ ರಾಜೀನಾಮೆಯ ಕುರಿತು ಮಾತನಾಡಿದ್ದರು. ಇಂದು ಕಾರು ಮರಕ್ಕೆ ಗುದ್ದಿ ಸಾವಿಗೀಡಾಗಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಈ ಸುದ್ದಿ ತಿಳಿದು ತಮ್ಮ ಎಕ್ಸ್ ಖಾತೆಯಲ್ಲಿ ಶ್ರದ್ಧಾಂಜಲಿ ತಿಳಿಸಿ, ಅವರ ಕುಟುಂಬದ ಜೊತೆ ನಿಲ್ಲುವುದಾಗಿ ಬರೆದುಕೊಂಡಿದ್ದಾರೆ.

Comments are closed.