Home News Spam Call: ಇನ್ಮುಂದೆ ಟ್ರೂ ಕಾಲರ್ ಇಲ್ಲದೆ ಡಿಸ್​ಪ್ಲೇಯಲ್ಲಿ ಕರೆ ಮಾಡಿದವರ ಹೆಸರು ಕಾಣಿಸುತ್ತೆ!

Spam Call: ಇನ್ಮುಂದೆ ಟ್ರೂ ಕಾಲರ್ ಇಲ್ಲದೆ ಡಿಸ್​ಪ್ಲೇಯಲ್ಲಿ ಕರೆ ಮಾಡಿದವರ ಹೆಸರು ಕಾಣಿಸುತ್ತೆ!

Spam calls

Hindu neighbor gifts plot of land

Hindu neighbour gifts land to Muslim journalist

Spam Call: ಮೊಬೈಲ್ ಬಳಕೆದಾರರಿಗೆ ಶೀಘ್ರದಲ್ಲೇ ಸ್ಪ್ಯಾಮ್ ಕರೆಗಳಿಂದ (Spam Call) ಪರಿಹಾರ ಸಿಗಲಿದೆ. ಇದಕ್ಕಾಗಿ ಸರ್ಕಾರ ಸತತವಾಗಿ ಪ್ರಯತ್ನ ನಡೆಸುತ್ತಿದೆ. ಸದ್ಯ ಬಳಕೆದಾರರು ಕರೆ ಮಾಡಿದವರ ಹೆಸರನ್ನು ಕಂಡುಹಿಡಿಯಲು ಟ್ರೂ ಕಾಲರ್ ನಂತಹ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಇದನ್ನು ಅವಲಂಬಿಸಬೇಕಾಗಿಲ್ಲ.

ಟೆಲಿಕಾಂ ಕಂಪನಿಗಳು ಸ್ವತಃ ಮೊಬೈಲ್ ಡಿಸ್​ಪ್ಲೇ ಮೇಲೆ ಕರೆ ಮಾಡಿದವರ ಹೆಸರನ್ನು ತೋರಿಸುತ್ತವೆ. ಇದಕ್ಕಾಗಿ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ, ಎಚ್‌ಪಿ, ಡೆಲ್, ಎರಿಕ್ಸನ್ ಮತ್ತು ನೋಕಿಯಾ ಜೊತೆ ಕೈಜೋಡಿಸಿವೆ. ಈ ಕಂಪನಿಗಳು ಒಟ್ಟಾಗಿ ಸರ್ವರ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸುತ್ತವೆ, ಅದು ಕರೆ ಮಾಡಿದವರ ಹೆಸರನ್ನು ಮೊಬೈಲ್ ಡಿಸ್​ಪ್ಲೇ ಮೇಲೆ ಪ್ರದರ್ಶಿಸುತ್ತದೆ.

ಮಾಧ್ಯಮ ವರದಿಗಳ ಪ್ರಕಾರ, ಟೆಲಿಕಾಂ ಕಂಪನಿಗಳು ಕಾಲಿಂಗ್ ನೇಮ್ ಪ್ರೆಸೆಂಟೇಶನ್ (CNAP) ಅನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಉಪಕರಣಗಳನ್ನು ಆರ್ಡರ್ ಮಾಡಿವೆ.

CNAP ಹೇಗೆ ಕೆಲಸ ಮಾಡುತ್ತದೆ?: 

ಈ ಸೇವೆಯು ಟ್ರೂ ಕಾಲರ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಇದು ಮೊಬೈಲ್ ಡಿಸ್​ಪ್ಲೇ ಮೇಲೆ ಕರೆ ಮಾಡಿದವರ ಹೆಸರನ್ನು ತೋರಿಸುತ್ತದೆ. ಮೊಬೈಲ್ ಫೋನ್‌ನಲ್ಲಿ CNAP ಅನ್ನು ಅಳವಡಿಸಿದಾಗ, ಟೆಲಿಕಾಂ ಕಂಪನಿಯಲ್ಲಿ ನೋಂದಾಯಿಸಲಾದ ಬಳಕೆದಾರ ಹೆಸರು ಮೊಬೈಲ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.