Earthquake: ಮ್ಯಾನ್ಮಾರ್-ಥೈಲ್ಯಾಂಡ್ ನಲ್ಲಿ ಪ್ರಭಲ ಭೂಕಂಪನ- 10 ಸೆಕೆಂಡ್‌ಗಳಲ್ಲಿ ಧರೆಗುರುಳಿದ ಗಗನಚುಂಬಿ ಕಟ್ಟಡಗಳು, ಭಯಾನಕ ವಿಡಿಯೋ ವೈರಲ್

Share the Article

Earthquake: ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ಗಡಿಯಲ್ಲಿ ಇಂದು ಸಂಭವಿಸಿದ 7.7 ತೀವ್ರತೆಯ ಭೂಕಂಪದ ಸಮಯದಲ್ಲಿ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಗಗನಚುಂಬಿ ಕಟ್ಟಡ ನೋಡನೋಡುತ್ತಿದ್ದಂತೆಯೇ ಧರೆಗುರುಳಿದೆ. ಇದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ ಸಾಗಯಿಂಗ್ ನಗರದ ವಾಯುವ್ಯಕ್ಕೆ ಭೂಮಿಯ 10 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಮ್ಯಾನ್ಮಾರ್‌ ಗಡಿ ದೇಶವಾಗಿರುವ ಭಾರತದ ನವದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ.

ಶುಕ್ರವಾರ ಬೆಳಗ್ಗೆ 11:50ರ ಸುಮಾರಿಗೆ 7.7 ತೀವ್ರಯ ಭೂಕಂಪ ಸಂಭವಿಸಿದೆ. 12:50ರ ಸುಮಾರಿಗೆ 6.8 ತೀವ್ರತೆಯಲ್ಲಿ ಮತ್ತೊಂದು ಬಾರಿ ಭೂಕಂಪ ಸಂಭವಿಸಿದೆ. ಅಲ್ಲದೆ, ಕನಿಷ್ಠ 43 ಕಾರ್ಮಿಕರು ನಾಪತ್ತೆಯಾಗಿದ್ದಾರೆ.

Comments are closed.