Government: ಸರ್ಕಾರದಿಂದ ದೇಶಾದ್ಯಂತ ಸಹಕಾರಿ ಟ್ಯಾಕ್ಸಿ ಸೇವೆ: ಕ್ಯಾಬ್ ಚಾಲಕರಿಗೆ ಹೆಚ್ಚಲಿದೆ ಆದಾಯ!

Share the Article

Government: ಕೇಂದ್ರ ಸರ್ಕಾರವು (Government) ಈಗ ದೇಶಾದ್ಯಂತ ಸಹಕಾರಿ ಟ್ಯಾಕ್ಸಿ ಸೇವೆ ಆರಂಭಿಸಲು ಯೋಜಿಸಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಸಂಸತ್​​ನಲ್ಲಿ ಈ ವಿಷಯ ತಿಳಿಸಿದ್ದಾರೆ. ಇದರಿಂದ ನಮ್ಮ ಯಾತ್ರಿ ಮಾದರಿಯಲ್ಲಿ ಈ ಸಹಕಾರಿ ಟ್ಯಾಕ್ಸಿ ಸರ್ವಿಸ್ ಇರಲಿದೆ. ರೇಡ್​​ನಿಂದ ಸಿಗುವ ಎಲ್ಲಾ ಆದಾಯವು ಚಾಲಕರಿಗೆ ಹೋಗುತ್ತದೆ. ಓಲಾ, ಊಬರ್​​ನಂತಹ ಕಾರ್ಪೊರೇಟ್ ಕಂಪನಿಗಳಿಗೆ ನಿಕಟ ಪೈಪೋಟಿ ಸೃಷ್ಟಿಯಾಗಲಿದೆ ಎಂದಿದ್ದಾರೆ.

ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ ದೇಶಾದ್ಯಂತ ಸಹಕಾರಿ ಟ್ಯಾಕ್ಸಿ ಸರ್ವಿಸ್ (Sahakari Taxi service) ಆರಂಭಿಸುವ ಸಾಧ್ಯತೆ ಇದೆ. ಕೇಂದ್ರ ಸಚಿವ ಅಮಿತ್ ಶಾ ಮಾ. 26 ಬುಧವಾರ ದಂದು ಸಂಸತ್​​​ನಲ್ಲಿ ಈ ಪ್ರಸ್ತಾಪ ತೆರೆದಿಟ್ಟಿದ್ದಾರೆ.

Comments are closed.