Viral Video : ಬುರ್ಖಾ ಧರಿಸದಿದ್ದರೆ ನರಕಕ್ಕೆ ಹೋಗುತ್ತೇವೆ – ಶಾಲಾ ಬಾಲಕಿ ಹೇಳಿಕೆಯ ವಿಡಿಯೋ ವೈರಲ್

Share the Article

Viral Video : ಚಾಮರಾಜನಗರ ಶಾಲೆಯೊಂದರಲ್ಲಿ ಖಾಸಗಿ ಶಾಲೆಯ ಬಾಲಕಿ ಒಬ್ಬಳು ಶಾಲಾ ಸಮವಸ್ತ್ರ ಧರಿಸಿ ‘ಬುರ್ಖಾ ಧರಿಸಿದರೆ ಒಳ್ಳೆಯದಾಗುತ್ತೆ, ಇಲ್ಲದಿದ್ದರೆ ದೇವರು ಮೆಚ್ಚುವುದಿಲ್ಲ’ ಎಂದು ಹೇಳಿರುವುದು ಈಗ ನಾನಾ ಚರ್ಚೆಗೆ ಕಾರಣವಾಗಿದೆ.

ಹೌದು, ಶಾಲಾ ವಸ್ತು ಪ್ರದರ್ಶನದಂತೆ ಕಾಣುವ ಹಾಗೂ ಅದರಲ್ಲಿ ಬಾಲಕಿಯು ಧರ್ಮದ ಕುರಿತಂತೆ ಮಾತನಾಡುವ ದೃಶ್ಯಾವಳಿ ಇದೀಗ ಎಲ್ಲೆಡೆ ಹಬ್ಬಿದೆ. ಎರಡು ಮಾದರಿ ಗೊಂಬೆಗಳನ್ನು ಮತ್ತು ಎರಡಯ ಪ್ರತ್ಯೇಕ ಶವ ಪೆಟ್ಟಿಗೆಯ ಮಾದರಿಗಳನ್ನು ಇಟ್ಟು ತನ್ನ ವಿಷಯದ ಕುರಿತು ವಿದ್ಯಾರ್ಥಿನಿಯು ವಿವರಣೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಬುರ್ಖಾ ಮತ್ತು ತುಂಡು ಬಟ್ಟೆ ಧರಿಸಿದ ಗೊಂಬೆಗಳನ್ನು ಉಲ್ಲೇಖಿಸಿ ವಿದ್ಯಾರ್ಥಿನಿಯು ವಿಡಿಯೋದಲ್ಲಿ ಉದಾಹರಣೆ ನೀಡಿದ್ದು, ನೀವು ಜೀವಂತವಿದ್ದಾಗ ಬುರ್ಖಾ ಧರಿಸಿದರೆ ಸ್ವರ್ಗಕ್ಕೆ ಹೋಗುತ್ತೀರಿ. ಬುರ್ಖಾ ಧರಿಸಿದವರು ಸತ್ತ ಮೇಲೆ ಅವರ ಶವಕ್ಕೆ ಏನೂ ಆಗುವುದಿಲ್ಲ. ಅವರ ಸಮಾಧಿ ಹೂವುಗಳಿಂದ ತುಂಬಿರುತ್ತದೆ. ತುಂಡು ಉಡುಗೆ ತೊಟ್ಟರೆ, ನರಕಕ್ಕೆ ಹೋಗುತ್ತೀರಿ. ನಿಮ್ಮ ಸಮಾಧಿಯಲ್ಲಿರುವ ಮೃತ ದೇಹವನ್ನ ಹಾವು, ಚೇಳುಗಳು ತಿನ್ನುತ್ತವೆ ಎಂದು ವಿದ್ಯಾರ್ಥಿನಿ ವಿವರಣೆ ನೀಡಿದ್ದಾಳೆ. ಇದೀಗ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

Comments are closed.