Basavangowda Yatnal: ನಾನು ಸಿಎಂ ಆದರೆ ಮೊದಲು ಮಾಡುವುದೇ ಈ ಕೆಲಸ – ಯತ್ನಾಳ್ ಘೋಷಣೆ

Share the Article

Basavangowda Yatnal: ರಾಜ್ಯದಲ್ಲಿ ಬಿಜೆಪಿ ಒಳಜಾಗಳ ತಾರಕಕ್ಕೇರುತ್ತಿದೆ. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್( Basavangowda Yatnal) ಅವರು ರಾಜ್ಯಾಧ್ಯಕ್ಷ ತಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಈ ಬೆನ್ನಲ್ಲಿ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು ನಾನು ಸಿಎಂ ಆದರೆ ಮೊದಲು ಈ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

ಹೌದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಇದೀಗ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಯತ್ನಾಳ್ ಅವರು ಸಿಎಂ ಆದರೆ ಮೊದಲು ಏನು ಕೆಲಸ ಮಾಡುತ್ತಾರೆ ಎಂಬುದನ್ನೂ ಹೇಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಅದೇನೆಂದರೆ ಉತ್ತರಪ್ರದೇಶದ ಬುಲ್ಡೋಜರ್‌ ಮಾಡಲ್‌ ಬಗ್ಗೆ ಸದಾ ಧ್ವನಿ ಎತ್ತುವ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಮುಖ್ಯಮಂತ್ರಿ ಆದರೆ ಮೊದಲು ಒಂದು ಸಾವಿರ ಬುಲ್ಡೋಜರ್‌ಗಳನ್ನು ಖರೀದಿಸುತ್ತೇನೆ. ರಾಜ್ಯದಲ್ಲಿ ಹಿಂದೂಗಳ ಮೇಲೆ ಹಲ್ಲೆಗಳು ನಡೆದಾಗ ಏನೂ ಆಗಲಿಲ್ಲ. ಈಗಿರುವ ಕಾಂಗ್ರೆಸ್‌ ಸರ್ಕಾರ ಕೂಡ ಏನೂ ಮಾಡಲಿಲ್ಲ, ನಮ್ಮ ಬಿಜೆಪಿ ಸರ್ಕಾರ ಕೂಡ ಏನೂ ಮಾಡಲಿಲ್ಲ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದರೆ ಮೊದಲು ಬುಲ್ಡೋಜರ್‌ ತರಬೇಕು. ಹಾಗಾಗಿ ನಾನು ಸಿಎಂ ಆದರೆ ಮೊದಲಿಗೆ 1000 ಬುಲ್ಡೋಜರ್ ಖರೀದಿ ಮಾಡುತ್ತೇನೆ. ಪ್ರತಿ ತಾಲ್ಲೂಕಿಗೆ 25 ಬುಲ್ಡೋಜರ್‌ ಆರ್ಡರ್‌ ಕೊಡುತ್ತೇನೆ. ಯಾರಾದರೂ ಬಾಯಿ ಬಿಟ್ರೆ ಅವರ ಮನೆ ಖಲಾಸ್ ಮಾಡ್ತೀವಿ ಎಂದು ಯತ್ನಾಳ್ ವಾರ್ನಿಂಗ್‌ ಕೂಡ ಕೊಟ್ಟಿದ್ದಾರೆ.

Comments are closed.