Karkala: ಕಾರ್ಕಳ: ಅಕ್ರಮ ಮರಳು ಸಾಗಾಟ-ಪ್ರಕರಣ ದಾಖಲು

Share the Article

Karkala: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡ ಘಟನೆ ಮಾ. 23ರಂದು ನಡೆದಿದೆ.

ಕಾರ್ಕಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಇವರು ಸಿಬ್ಬಂದಿಯೊಂದಿಗೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಟಿ.ಎಮ್.ಎ.ಪೈ ಆಸ್ಪತ್ರೆ ಸಮೀಪ ವಾಹನ ತಪಾಸಣೆ ಮಾಡುತ್ತಿರುವಾಗ ಟಿಪ್ಪರ ಲಾರಿಯಲ್ಲಿ ಟಿಪ್ಪರ ಲಾರಿಯ ಚಾಲಕ ಹಾಗೂ ಮಾಲೀಕರು ಸಂಘಟಿತರಾಗಿ ಎಲ್ಲಿಯೋ ಸರಕಾರಿ ಸ್ಥಳದಿಂದ ಅಕ್ರಮವಾಗಿ ಕಳವು ಮಾಡಿದ 2 ಯುನಿಟ್ ಮರಳನ್ನು ಪುಲ್ಕೆರಿ ಕಡೆಯಿಂದ ಜೋಡುರಸ್ತೆಯ ಕಡೆಗೆ ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದ್ದನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Comments are closed.