Bangalore: ಶಾಲಾ ಮಕ್ಕಳಿಂದ ಶೌಚಾಲಯ ಗುಂಡಿ ಕ್ಲೀನ್‌ ಮಾಡಿಸಿದ ಪ್ರಕರಣ; ಇಬ್ಬರು ಶಿಕ್ಷಕಿಯರು ಅಮಾನತು!

Share the Article

Bangalore: ಶಾಲಾ ಮಕ್ಕಳಿಂದ ಶೌಚಾಲಯ ಗುಂಡಿ ಕ್ಲೀನ್‌ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಶಿಕ್ಷಕಿಯರನ್ನು ಅಮಾನತು ಮಾಡಿರುವ ಕುರಿತು ವರದಿಯಾಗಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರು ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಸಾಕಮ್ಮ ಹಾಗೂ ದೈಹಿಕ ಶಿಕ್ಷಕಿ ಸುಮಿತ್ರ ಅಮಾನತುಗೊಳಗಾದವರು. ಶಿಕ್ಷಣ ಇಲಾಖೆಯ ಡಿಡಿ ಕೆ.ಬಿ.ನಿಂಗರಾಜಪ್ಪ ಶಿಕ್ಷಕಿಯರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಶೌಚಾಲಯ ಗುಂಡಿ ಕ್ಲೀನ್‌ ಮಾಡಿಸಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಹಕ್ಕು ಉಲ್ಲಂಘನೆಯಾಗಿದೆ ಎಂದು ಪರಿಶೀಲನೆ ನಡೆಸಿದ ಅಧಿಕಾರಿಗಳು ವರದಿ ನೀಡಿದ್ದು, ವರದಿ ಆಧರಿಸಿ, ಇಬ್ಬರು ಶಿಕ್ಷಕಿಯರು ಸೇರಿ ಎಲ್ಲಾ ಶಿಕ್ಷಕಿಯರಿಗೂ ಕಾರಣ ಕೇಳಿ ಶಿಕ್ಷಣ ಇಲಾಖೆ ಡಿಡಿ ನೋಟಿಸ್‌ ಜಾರಿ ಮಾಡಲಾಗಿದೆ.

Comments are closed.