of your HTML document.

Sullia: ತಿಂಗಳ ಹಿಂದೆ ನಾಯಿ ಕಡಿತಕ್ಕೆ ಒಳಗಾದ ಮಹಿಳೆ ಸಾವು!

Sullia: ತಿಂಗಳ ಹಿಂದೆ ನಾಯಿ ಕಡಿತಕ್ಕೆ ಒಳಗಾದ ಮಹಿಳೆಯೋರ್ವಳು ಮೃತಪಟ್ಟ ಘಟನೆ ಸುಳ್ಯ ಸಂಪಾಜೆಯಲ್ಲಿ ನಡೆದಿದೆ.

ಫೆ.7 ರಂದು 42 ವರ್ಷದ ಮಹಿಳೆ ಸಂಪಾಜೆಯ ಕಲ್ಲುಗುಂಡಿ ಸಮೀಪ ಅರಂತೋಡಿನಲ್ಲಿ ತೋಟದ ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರಿಗೆ ನಾಯಿಮರಿಯೊಂದು ಕಚ್ಚಿತ್ತು. ಆದರೆ ಮಹಿಳೆ ಇದನ್ನು ಯಾರಿಗೂ ತಿಳಿಸಿರಲಿಲ್ಲ. ಹಾಗೆನೇ ಚಿಕಿತ್ಸೆ ಕೂಡಾ ಮಾಡಿರಲಿಲ್ಲ. ಸೋಮವಾರ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಾಗ, ಏಕಾಏಕಿ ನೀರನ್ನು ನೋಡಿ ಬೊಬ್ಬೆ ಹಾಕುವುದು, ವಿಚಿತ್ರ ವರ್ತನೆ ಮಾಡುತ್ತಿದ್ದುದ್ದನ್ನು ಕಂಡು ಆಕೆಯಲ್ಲಿ ವೈದ್ಯರು ಪೂರಕ ಮಾಹಿತಿ ಕೇಳಿದಾಗ ನಾಯಿ ಕಚ್ಚಿರುವ ಕುರಿತು ಹೇಳಿದ್ದರು.

ನಂತರ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ವೆನ್ಲಕ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಾ.20 ರಂದು ಮೃತ ಹೊಂದಿದ್ದಾರೆ.

ಮಹಿಳೆಗೆ ರೇಬಿಸ್‌ ಕಾಯಿಲೆ ಇರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪರಿಸರದ ಹಲವರಿಗೆ ಹಾಗೂ ಮನೆಯವರಿಗೆ ಎಆರ್‌ವಿ ಲಸಿಕೆ ನೀಡಲಾಗಿದೆ. ಮಹಿಳೆಗೆ ಕಚ್ಚಿರುವ ನಾಯಿಮರಿ ಅರಂತೋಡಿನಲ್ಲಿ ಇನ್ನೂ ಕೆಲವರಿಗೆ ಕಚ್ಚಿದೆ ಎನ್ನಲಾಗಿದೆ. ನಾಯಿ ಕಡಿತಕ್ಕೊಳಗಾದವರು ಕೂಡಲೇ ಸೂಕ್ತ ಲಸಿಕೆ ಪಡೆದುಕೊಳ್ಳುವಂತೆ ತಾಲೂಕು ವೈದ್ಯಾಧಿಕಾರಿಗಳು ವಿನಂತಿ ಮಾಡಿದ್ದಾರೆ.

Comments are closed.