High Court: ಕೂದಲಿನ ಕುರಿತು ಕಮೆಂಟ್‌; ಲೈಂಗಿಕ ಕಿರುಕುಳವಲ್ಲ-ಹೈಕೋರ್ಟ್‌

Share the Article

High Court: ಮಹಿಳಾ ಸಹೋದ್ಯೋಗಿಯ ಕೂದಲಿನ ಕುರಿತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಿರಿಯ ಅಧಿಕಾರಿ ಮಾಡಿದ ಕಮೆಂಟ್‌ಗಳು ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ಕಾಯಿದೆ, 2013 ಅಡಿಯಲ್ಲಿ ಲೈಂಗಿಕ ಕಿರುಕುಳವಲ್ಲ ಎಂದು ಹೇಳಿದೆ.

2022 ರ ತರಬೇತಿ ಅವಧಿಯಲ್ಲಿ ನಡೆದ ಪ್ರಕರಣ ಇದಾಗಿದ್ದು, ಆ ಸಮಯದಲ್ಲಿ ವಿನೋದ್‌ ಕಚವೆ ಅವರು, ದೂರುದಾರರು ತಮ್ಮ ಕೂದಲನ್ನು ಸರಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ, ” ನಿಮ್ಮ ಕೂದಲನ್ನು ನಿರ್ವಹಿಸಲು ನೀವು ಜೆಸಿಬಿ ಬಳಸಬೇಕು” ಎಂದು ಹಾಸ್ಯ ಮಾಡಿ, ಯೇ ರೇಷ್ಮಿ ಜುಲ್ಫೇನೇ ಹಾಡಿನ ಸಾಲನ್ನು ಹಾಡಿದದರು. ದೂರುದಾರರು ಕಚವೆ ಅವರು ಇತರ ಮಹಿಳೆಯರ ಮುಂದೆ ಪುರುಷ ಸಹೋದ್ಯೋಗಿಯ ಖಾಸಗಿ ಭಾಗಗಳ ಬಗ್ಗೆ ಅನುಚಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪ ಮಾಡಿದ್ದರು.

ಹೈಕೋರ್ಟ್‌, ದೂರುಗಳಲ್ಲಿ ಸತ್ಯಾಂಶವಿದ್ದರೂ, ಅವರು ಲೈಂಗಿಕ ಕಿರುಕುಳಕ್ಕೆ ಸಮನಾಗುವುದಿಲ್ಲ ಎಂದು ಹೇಳಿದ್ದು, ದೂರುದಾರರು ಆರಂಭದಲ್ಲಿ ಕಮೆಂಟ್‌ಗಳನ್ನು ಕಿರುಕುಳವೆಂದು ಪರಿಗಣನೆ ಮಾಡಿಲ್ಲ. ರಾಜೀನಾಮೆ ನೀಡಿದ ನಂತರವೇ ದೂರು ದಾಖಲಾಗಿದೆ ಎಂದು ಹೇಳಿದರು.

ಆರೋಪಿತ ನಡವಳಿಕೆಯು ಪೋಷ್‌ ಕಾಯಿದೆಯ ಅಡಿಯಲ್ಲಿ ಲೈಂಗಿಕ ಕಿರುಕುಳದ ಮಾನದಂಡಗಳನ್ನು ಪೂರೈಸುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ.

Comments are closed.