Hassana: ಶಾಲಾ ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ; 9 ಮಂದಿಗೆ ಗಾಯ, ಒಬ್ಬರಿಗೆ ಗಂಭೀರ

Share the Article

Hassana: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಖಾಸಗಿ ಶಾಲೆಯ ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಸಕಲೇಶಪುರ ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿ ನಡೆದಿದೆ.

ಹೆಜ್ಜೇನು ದಾಳಿಯಿಂದ 9 ಮಂದಿ ಗಾಯಗೊಂಡಿರುವ ಕುರಿತು ವರದಿಯಾಗಿದೆ. ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ರೋಟರಿ ಶಾಲೆಯ ಸಿಬ್ಬಂದಿ ಶಾಲೆ ಮುಗಿಸಿಕೊಂಡು, ಮನೆಗೆ ತೆರಳುವಾಗ ಹೆಜ್ಜೇನು ದಾಳಿ ಮಾಡಿದೆ. ಶಾಲೆಯ ಎದುರಿಗೆ ಇರುವ ಮನೆಯ ಮುಂದೆ ನಿಂತಿದ್ದ ವರ್ಗಿಸ್‌ ಎಂಬುವರ ಮೇಲೂ ಹೆಜ್ಜೇನು ದಾಳಿ ನಡೆದಿದೆ.

ಹೆಜ್ಜೇನು ದಾಳಿಯಿಂದ ಕೋಮಲ ಸ್ಥಿತಿ ಗಂಭೀರವಾಗಿದೆ. ಉಳಿದವರು ಹೆಜ್ಜೇನು ದಾಳಿಯಿಂದ ಗಾಯಗೊಂಡಿದ್ದು, ಸಕಲೇಶಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments are closed.