Seema Haider: ಹೆಣ್ಣು ಮಗುವಿಗೆ ಜನ್ಮ ನೀಡಿದ ಸೀಮಾ ಹೈದರ್!

Share the Article

Seema Haider: ಆನ್‌ಲೈನ್‌ ಗೇಮ್‌ ಪಬ್ಜಿ ಮೂಲಕ ಪ್ರೇಮವಾಗಿ ಪಾಕಿಸ್ತಾನದ ಗಡಿ ದಾಟಿ ಬಂದ ಸೀಮಾ ಹೈದರ್‌ ಗ್ರೇಟರ್‌ ನೋಯ್ಡಾದ ನಿವಾಸಿ ಸಚಿನ್‌ ಜೊತೆ ವಿವಾಹವಾಗಿದ್ದು, ಇದೀಗ ಸೀಮಾ ಹೈದರ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ಸೀಮಾ ತಾನು ತಾಯಿ ಆಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು. ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ಸೀಮಾ ಹೈದರ್‌ ನೇಪಾಳದ ಪಶುಪತಿನಾಥ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಸೀಮಾ ತನ್ನ ಮೂವರು ಪುತ್ರಿಯರಾದ ಫರ್ವಾ (6), ಫರಿಹಾ ಬಟೂಲ್‌ (4), ಮತ್ತು ಫರ್ಹಾ ಎಂಬ ಮಕ್ಕಳಿಗೆ ಕ್ರಮವಾಗಿ ಪ್ರಿಯಾಂಕಾ, ಮುನ್ನಿ, ಪರಿ ಎಂದು ಹೆಸರು ಬದಲಾವಣೆ ಮಾಡಲಾಗಿದೆ. ಎಂಟು ವರ್ಷದ ಮಗ ಫರ್ಹಾನ್‌ ಆಲಿಯನ್ನು ರಾಜ್‌ ಎಂದು ಮರು ನಾಮಕರಣ ಮಾಡಲಾಗಿತ್ತು.

Comments are closed.