Puttur: ಪುತ್ತೂರು: ಹತ್ತೂರ ಒಡೆಯ ಮಹಾಲಿಂಗೇಶ್ವರನ ಜಾತ್ರೆಗೆ ಪೂರ್ವಭಾವಿ ಸಿದ್ಧತೆಗಳು ಪ್ರಾರಂಭ!

Puttur: ಪುತ್ತೂರಿನ (Puttur) ಬಹುದೊಡ್ಡ ಹಬ್ಬ ಎಂದೇ ಖ್ಯಾತಿ ಪಡೆದಿರುವ `ಪುತ್ತೂರ ಜಾತ್ರೆ’ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಾಮಹೋತ್ಸವ ಎ.1೦ರಿಂದ 2೦ ತನಕ ನಡೆಯಲಿದ್ದು, ಈ ಸಂಬಂಧ ಬ್ರಹ್ಮರಥ ಸಿದ್ಧಗೊಳಿಸಲು ಸೋಮವಾರ ರಥವನ್ನು ಪೂಜಾವಿಧಿವಿಧಾನಗಳೊಂದಿಗೆ ರಥಬೀದಿಗೆ ತರಲಾಯಿತು.

ಈ ಸಂದರ್ಭ ರಥಕಟ್ಟುವ ಸ್ಥಳವನ್ನು ಮಲ್ಲಿಗೆಮಾಲೆ ಭೂಸ್ಪರ್ಶ ಮಾಡುವ ಮೂಲಕ ನಿಗದಿಪಡಿಸಿತು. ರಥಮನೆಯಿಂದ ರಥಬೀದಿಗೆ ಬ್ರಹ್ಮರಥ ಆಗಮನದೊಂದಿಗೆ ಪುತ್ತೂರು ಜನತೆಗೆ ಜಾತ್ರೆ ಆರಂಭಕ್ಕೆ ಕ್ಷಣಗಣನೆ ಆರಂಭವಾಯಿತು ಎಂಬುವುದು ಜನತೆಯ ನಂಬಿಕೆಯಾಗಿದೆ. ಎ.1೦ಕ್ಕೆ ಆರಂಭಗೊಳ್ಳುವ ಪುತ್ತೂರು ಜಾತ್ರೋತ್ಸವದಲ್ಲಿ ಎ.೧೭ರಂದು ಬ್ರಹ್ಮರಥೋತ್ಸವ ನಡೆಯಲಿದೆ. ಈ ಜಾತ್ರೋತ್ಸವದಲ್ಲಿ ಸೀಮೆಯ ಭಕ್ತರೂ ಸೇರಿದಂತೆ ದಕ ಜಿಲ್ಲೆಯ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ. 

Comments are closed.