Suicide: ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗವನ್ನೇ ಕುಯ್ದುಕೊಂಡು ಯುವಕ ಸಾವು!

Suicide: ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗವನ್ನು ತಾನೇ ಕೊಯ್ದು ಕೊಂಡು ಸಾವನ್ನಪ್ಪಿದ ವಿಚಿತ್ರ ಘಟನೆ ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರಿನ ಕಚ್ಚೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಾರ್ಕೂರಿನ ಕಚ್ಚೂರು ಗ್ರಾಮದ ಸಂತೋಷ್ (42) ಎಂದು ಗುರುತಿಸಲಾಗಿದೆ.
ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದ ಸಂತೋಷ್ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದರು. ರವಿವಾರ ಮನೆಯ ಬಾತ್ ರೂಮಿನಲ್ಲಿ ರಕ್ತ ಸಿಕ್ತರಾಗಿ ಬಿದ್ದುಕೊಂಡಿದ್ದ ಸಂತೋಷ್ ಮರ್ಮಾಂಗದಿಂದ ರಕ್ತ ಸುರಿಯುತ್ತಿತ್ತು. ಕೂಡಲೇ ಚಿಕಿತ್ಸೆಗೆ ಬ್ರಹ್ಮಾವರದ ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಸಂತೋಷ ಅವರು ಮೃತಪಟ್ಟಿರುವುದಾಗಿ ತಿಳಿಸಿದರು.
ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.