Ayodhya: ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ನಿಂದ 400 ಕೋಟಿ ತೆರಿಗೆ ಪಾವತಿ!!

Share the Article

 

Ayodhya: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿ ಒಂದು ವರ್ಷ ಕಳೆದಿದೆ. ಈ ಒಂದು ವರ್ಷದ ಅವಧಿಯಲ್ಲಿ ಮಂದಿರಕ್ಕೆ ಸಾವಿರಾರು ಕೋಟಿ ದೇಣಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ನಿಂದ 400 ಕೋಟಿ ತೆರಿಗೆಯನ್ನು ಪಾವತಿಸಲಾಗಿದೆ.

 

 ಈ ಕುರಿತಾಗಿ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರೈ ಅವರು ಮಾಹಿತಿ ನೀಡಿದ್ದು ಕ್ಷೇತ್ರ ಟ್ರಸ್ಟ್ ಕಳೆದ ಐದು ವರ್ಷಗಳಲ್ಲಿ ಸರ್ಕಾರಕ್ಕೆ ಸುಮಾರು 400 ಕೋಟಿ ರೂ. ತೆರಿಗೆ ಪಾವತಿಸಿದೆ. ಈ ಮೊತ್ತವನ್ನು ಫೆಬ್ರವರಿ 5, 2020 ಮತ್ತು ಫೆಬ್ರವರಿ 5, 2025 ರ ನಡುವೆ ಪಾವತಿಸಲಾಗಿದೆ ಎಂದು ಹೇಳಿದ್ದಾರೆ.

 

ಇದರಲ್ಲಿ 270 ಕೋಟಿ ರೂ.ಗಳನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆಗಿ ಪಾವತಿಸಲಾಗಿದ್ದು, ಉಳಿದ 130 ಕೋಟಿ ರೂ.ಗಳನ್ನು ವಿವಿಧ ತೆರಿಗೆ ವರ್ಗಗಳ ಅಡಿಯಲ್ಲಿ ಪಾವತಿಸಲಾಗಿದೆ ಎಂದು ಅವರು ಹೇಳಿದ್ದಾರೆ..

Comments are closed.