Home News Serial Accident: ಸಾಗರ ಬಳಿ ಸರಣಿ ಅಪಘಾತ; ಇಬ್ಬರ ಸಾವು, ನಾಲ್ವರಿಗೆ ಗಾಯ

Serial Accident: ಸಾಗರ ಬಳಿ ಸರಣಿ ಅಪಘಾತ; ಇಬ್ಬರ ಸಾವು, ನಾಲ್ವರಿಗೆ ಗಾಯ

Hindu neighbor gifts plot of land

Hindu neighbour gifts land to Muslim journalist

Shivamogga: ಕಾರು, ಆಟೋ ಹಾಗೂ ಬೈಕ್‌ಗಳ ನಡುವೆ ಸರಣಿ ಅಪಘಾತ ನಡೆದಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಸಾಗರದ ಕಾಸ್ಪಡಿ ಹಾಗೂ ಹೊಸಗುಂದ ನಡುವೆ ನಿನ್ನೆ ತಡ ರಾತ್ರಿ ಸರಣಿ ಅಪಘಾತ ನಡೆದಿದೆ.

ಸಾಗರ ತಾಲೂಕಿನ ಕೆಳದಿ ಗ್ರಾಮದ ನಿವಾಸಿಯಾಗಿರುವ ಬೈಕ್‌ ಸವಾರ ಸುಧೀಂದ್ರ ಎಂಬುವವರೇ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಸಾಗರದ ನಿವಾಸಿ ಆಟೋ ಚಾಲಕ ರಾಘವೇಂದ್ರ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತ ಹೊಂದಿದ್ದಾರೆ.

ಬೈಕ್‌ ಸವಾರ ಸುಧೀಂದ್ರ ಸಾಗರದಿಂದ ಶಿವಮೊಗ್ಗಕ್ಕೆ ಬರುವಾಗ, ಆಟೋ ಚಾಲಕ ರಾಘವೇಂದ್ರ ತನ್ನ ಆಟೋದಲ್ಲಿ ಹಣಗೆರೆ ಕಟ್ಟೆಗೆ ಹೋಗಿ ವಾಪಾಸು ಸಾಗರಕ್ಕೆ ಬರುವ ಸಂದರ್ಭದಲ್ಲಿ ಅಪಘಾತ ನಡೆದಿರುವ ಕುರಿತು ವರದಿಯಾಗಿದೆ.

ಆಟೋದಲ್ಲಿದ್ದ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಿದ ಚಿಕಿತ್ಸೆ ನೀಡಲಾಗುತ್ತಿದೆ.