Home News Mangalore Accident: ಹರೇಕಳದಲ್ಲಿ ಹಂದಿ ಸ್ಕೂಟರಿಗೆ ಡಿಕ್ಕಿ ಹೊಡೆದು ವೃದ್ಧ ಮಹಿಳೆ ಸಾವು!

Mangalore Accident: ಹರೇಕಳದಲ್ಲಿ ಹಂದಿ ಸ್ಕೂಟರಿಗೆ ಡಿಕ್ಕಿ ಹೊಡೆದು ವೃದ್ಧ ಮಹಿಳೆ ಸಾವು!

Hindu neighbor gifts plot of land

Hindu neighbour gifts land to Muslim journalist

Mangalore Accident: ತಾಯಿ ಮತ್ತು ಮಗ ಸ್ಕೂಟರಿನಲ್ಲಿ ತೆರಳುತ್ತಿದ್ದಾಗ ಕಾಡು ಹಂದಿ ದಿಢೀರ್ ಅಡ್ಡ ಬಂದ ಪರಿಣಾಮ ತಾಯಿ ರಸ್ತೆಗೆಸೆಯಲ್ಪಟ್ಟು ತೀವ್ರ ಗಾಯಗೊಂಡು ಮೃತಪಟ್ಟ ಘಟನೆ ಹರೇಕಳ ಗ್ರಾಮದ ಖಂಡಿಗ ಎಂಬಲ್ಲಿ ಸಂಭವಿಸಿದೆ.

ಹರೇಕಳ ಗ್ರಾಮದ ಪೊಲ್ಕೆ ಮೇಗಿನಮನೆ ನಿವಾಸಿ ದೇವಕಿ ಮಾಣೈ (72) ಮೃತ ಮಹಿಳೆ. ವರದರಾಜ್ ಮಾಣೈ ಅವರು ತನ್ನ ತಾಯಿ ದೇವಕಿ ಮಾಣೈ ಅವರನ್ನ ಶನಿವಾರ ರಾತ್ರಿ ಸಂಬಂಧಿಕರ ಮನೆಯಿಂದ ಬಜಾಲಿನ ಸ್ಕೂಟರಿನಲ್ಲಿ ಕುಳ್ಳಿರಿಸಿ ಅಡ್ಯಾರು-ಪಾವೂರು ಮಾರ್ಗವಾಗಿ ಹರೇಕಳದ ಮನೆಗೆ ಮರಳುತ್ತಿದ್ದ ವೇಳೆ ದಾರಿ ಮಧ್ಯದ ಖಂಡಿಗ ಎಂಬಲ್ಲಿ ಹಳೇ ಪಂಚಾಯತ್ ಕಚೇರಿ ಕಟ್ಟಡದ ಬಳಿಯ ಗುಡ್ಡ ಪ್ರದೇಶದಿಂದ ಕಾಡು ಹಂದಿ ದಿಢೀರ್ ಆಗಿ ರಸ್ತೆ ಕಡೆ ಧಾವಿಸಿತ್ತು. ಈ ವೇಳೆ ಸ್ಕೂಟರ್ ಚಲಾಯಿಸುತ್ತಿದ್ದ ವರದರಾಜ್ ಅವರು ವಿಚಲಿತರಾಗಿ ಹಠಾತ್ತನೆ ಬ್ರೇಕ್ ಹೊಡೆದ ಪರಿಣಾಮ ತಾಯಿ ಮತ್ತು ಮಗ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಗಂಭೀರ ಗಾಯಗೊಂಡ ದೇವಕಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.