Mangaluru : ಜಾತ್ರೆಯ ದೀಪಾಲಂಕಾರ ತೆಗೆಯುವಾಗ ಜಗಳ, ಚೂರಿ ಇರಿತ!!

Share the Article

Mangaluru : ದೇವರ ಜಾತ್ರೆಯೊಂದಕ್ಕೆ ಅಳವಡಿಸಲಾಗಿದ್ದ ದೀಪಾಲಂಕಾರಗಳನ್ನು ತೆರೆವುಗೊಳಿಸುತ್ತಿರುವ ವೇಳೆಯಲ್ಲಿ ಇಬ್ಬ ಇಬ್ಬರು ವ್ಯಕ್ತಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಚೂರಿ ಇರಿಯುವ ಮೂಲಕ ಅಂತ್ಯ ಕಂಡಿದೆ.

ಹೌದು, ಅಡ್ಯಾರು ಶ್ರೀ ಮಹಾಲಿಂಗೇಶ್ವರ ದೇಗುಲದ ಜಾತ್ರೆ ಹಿನ್ನೆಲೆಯಲ್ಲಿ ಬೀದಿಯಲ್ಲಿ ಅಳವಡಿಸಲಾಗಿದ್ದ ವಿದ್ಯುತ್‌ ದೀಪಾಲಂಕಾರ ತೆಗೆಯುವ ಸಂದರ್ಭದಲ್ಲಿ ರೋಡಿನಲ್ಲಿ ಬಿದ್ದಿದ್ದ ಕೇಬಲನ್ನು ತೆಗೆಯುವಾಗ ಬಂದ ಪಿಕಪ್‌ ಚಾಲಕ ಮನೋಜ್‌ ಹಾಗೂ ಸುರೇಶ್‌ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಅಲ್ಲಿದ್ದ ಊರಿನವರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಆದರೆ ಸ್ಥಳದಿಂದ ತೆರಳಿದ ಮನೋಜ್‌, ಕಾರಿನಲ್ಲಿ ರತನ್‌ ಮತ್ತು ಹರ್ಷಿತ್‌ ಎಂಬವರನ್ನು ಕರೆದುಕೊಂಡು ಬಂದು ಸುರೇಶ್‌ನ ಎಡ ತೋಳಿಗೆ ಚೂರಿಯಿಂದ ಇರಿದಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ವಾಮಂಜೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.