Gold Smugling: ಸರಕಾರಿ ವಾಹನದಲ್ಲೇ ರನ್ಯಾ ಚಿನ್ನ ಸಾಗಾಟ!

Share the Article

Gold Smugling: ಚಿನ್ನ ಕಳ್ಳಸಾಗಾಣಿಕೆಯ ಆರೋಪದ ಮೇಲೆ ನಟಿ ರನ್ಯಾ ರಾವ್‌ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧನ ಮಾಡಿದ್ದು, ಡಿಆರ್‌ಐ ಅಧಿಕಾರಿಗಳ ತನಿಖೆ ವೇಳೆ ಚಿನ್ನವನ್ನು ಅಕ್ರಮವಾಗಿ ವಿಮಾನ ನಿಲ್ದಾಣದಿಂದ ಹೇಗೆ ಸಾಗಿಸುತ್ತಿದ್ದಳು ಎನ್ನುವ ಕುರಿತು ಪತ್ತೆ ಹಚ್ಚಿದ್ದಾರೆ. ದುಬೈನಿಂದ ಅಕ್ರಮವಾಗಿ ತಂದ ಚಿನ್ನವನ್ನು ನಟಿ ರನ್ಯಾ ರಾವ್‌ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸರಕಾರಿ ವಾಹನದಲ್ಲಿ ಸಾಗಿಸುತ್ತಿರುವ ಕುರಿತು ಡಿಆರ್‌ಐ ತನಿಖೆ ಸಂದರ್ಭ ಬಹಿರಂಗವಾಗಿರುವ ಕುರಿತು ವರದಿಯಾಗಿದೆ.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಐಪಿಎಸ್‌ ಅಧಿಕಾರಿಗಳಿಗೆ ಎರಡು ಹೆಚ್ಚುವರಿ ಕಾರುಗಳನ್ನು ನೀಡಲಾಗುತ್ತದೆ. ಈ ಕಾರು ಕೂಡಾ ಅಧಿಕಾರಿಯವರ ಕುಟುಂಬದವರಿಗೆ ಬಳಕೆಯಾಗುತ್ತದೆ. ಅದೇ ರೀತಿ ಡಿಜಿಪಿ ರಾಮಚಂದ್ರ ರಾವ್‌ ಅವರಿಗೂ ಸರಕಾರ ಹೆಚ್ಚುವರಿ ಕಾರು ನೀಡಲಾಗಿತ್ತು. ಈ ವಾಹನದಲ್ಲೇ ಹಲವು ಬಾರಿ ರನ್ಯಾ ರಾವ್‌ ವಿಮಾನ ನಿಲ್ದಾಣಕ್ಕೆ ಓಡಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಪ್ರೋಟೋಕಾಲ್‌ ಸಿಬ್ಬಂದಿಗೆ ಸಿಬಿಐ ಅಧಿಕಾರಿ ಗೌರವ್‌ ಗುಪ್ತಾ ನೇತೃತ್ವದಲ್ಲಿ  ತನಿಖಾ ತಂಡ ನೋಟಿಸ್‌ ಜಾರಿ ಮಾಡಿದೆ.

Comments are closed.