KPSC ಪರೀಕ್ಷೆಗಳಲ್ಲಿ ಮಹತ್ವದ ಬದಲಾವಣೆ !!

KPSC: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​​​ಸಿ) ಪರೀಕ್ಷೆಗಳು ಇತ್ತೀಚಿಗೆ ಅವ್ಯವಸ್ಥೆಯ ಆಗರಗಳಾಗಿ ಬಿಟ್ಟಿವೆ. ಎಷ್ಟೇ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದರು ಕೂಡ ಹೊಸ ಹೊಸ ಸಮಸ್ಯೆಗಳು ಇದರಲ್ಲಿ ಹುಟ್ಟಿಕೊಳ್ಳುತ್ತಿವೆ. ಭಾಷಾಂತರದಲ್ಲಿನ ತೊಡಕು ಇತ್ಯಾದಿ ಲೋಪದೋಷಗಳು ಪ್ರತಿ ಸಮಸ್ಯೆಯನ್ನು ಕಣ್ಣಿಗೆ ರಾಚುತ್ತಿವೆ. ಈ ಹಿನ್ನೆಲೆಯಲ್ಲಿ ಭಾರೀ ಟೀಕೆಗಳಿಗೆ ಕೆಪಿಎಸ್​​ಸಿ ಗುರಿಯಾಗಿದೆ. ಈಗ ಸದನದಲ್ಲೂ ಕೆಪಿಎಸ್​​​ಸಿ ಅವಾಂತರಗಳ ಬಗ್ಗೆ ಪ್ರತಿಪಕ್ಷಗಳೂ ಧ್ವನಿ ಎತ್ತಿವೆ. ಹೀಗಾಗಿ ಸರ್ಕಾರವು KPSC ಪರೀಕ್ಷೆಗಳಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ.

ಹೌದು, ಕೆಪಿಎಸ್​​​ಸಿ ಕುರಿತಾದ ಸುಧಾರಣೆಯ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕೆಪಿಎಸ್​​​​​ಸಿ ಸುಧಾರಣಾ ಕ್ರಮಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು:

* ಕೆಪಿಎಸ್​​​ಸಿ ಪರೀಕ್ಷೆ, ಆಡಳಿತ ಸುಧಾರಣೆಗೆ ಪ್ರತ್ಯೇಕ ಸಮಿತಿ ರಚನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

* ಸಮಿತಿ ಶಿಫಾರಸು ಪಾಲನೆ ಮಾಡುವೆ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.

* ಒಟ್ಟಾರೆ ಕೆಪಿಎಸ್​​​ಸಿಯ ಸಮಗ್ರ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಒತ್ತು ನೀಡಿ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆದಿದೆ.

*ಮುಂದಿನ ಅಧಿವೇಶನದ ವೇಳೆಗೆ ಕೆಪಿಎಸ್​​​​ಸಿ ಸುಧಾರಣೆಗೆ ಸಂಬಂಧಿಸಿದ ವಿಧೇಯಕ ಮಂಡನೆ ಸಾಧ್ಯತೆ ಇದೆ.

Comments are closed.