Sanvi Sudeep: ಸುದೀಪ್ ಪುತ್ರಿ ಸಾನ್ವಿ ಕ್ರಶ್ ಇವರೇ ನೋಡಿ!!

Sanvi Sudeep: ಕನ್ನಡದ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ(Sanvi Sudeep) ಅವರು ಇತ್ತೀಚಿಗೆ ಕನ್ನಡದ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ತಂದೆಯ ಹೆಸರನ್ನು ಎಲ್ಲಿಯೂ ಬಳಸದೆ ತಮ್ಮದೇ ವಿಶೇಷ ಪ್ರತಿಭೆ ಮೂಲಕ ಅವರು ಗುರುತಿಸಿಕೊಳ್ಳಲು ಇಷ್ಟಪಡುತ್ತಿದ್ದಾರೆ. ಇದೀಗ ಸಂದರ್ಶನ ಒಂದರಲ್ಲಿ ಸಾನ್ವಿ ಅವರು ತಮ್ಮ ಕ್ರಷ್ ಯಾರು ಎಂಬುದಾಗಿ ರಿವಿಲ್ ಮಾಡಿದ್ದಾರೆ.
ಹೌದು, ಸಂದರ್ಶನದಲ್ಲಿ ಸಖತ್ ಬೋಲ್ಡ್ ಆಗಿ ಮಾತನಾಡಿರುವ ಅವರು ತಮ್ಮ ಕ್ರಶ್ ಯಾರೆಂದು ಕೂಡ ಹೆಸರು ಕೂಡ ರಿವೀಲ್ ಮಾಡಿದ್ದಾರೆ. ನನಗೆ ಕ್ರಶ್ ಆಗಿರುವುದು ಇಬ್ಬರ ಮೇಲೆ ಮಾತ್ರ. ಒಬ್ಬರು ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರಾ. ಮತ್ತೊಬ್ಬರು ಟಾಲಿವುಡ್ ನಟ ಅಲ್ಲು ಅರ್ಜುನ್ ಎಂದು ಸಾನ್ವಿ ರಿವೀಲ್ ಮಾಡಿದ್ದಾರೆ. ಇನ್ನು ಅಲ್ಲು ಅರ್ಜುನ್ ಅವರ ವಿಚಾರಕ್ಕೆ ಬಂದರೆ, ಅವರಂದ್ರೆ ನನಗೆ ಎಷ್ಟು ಇಷ್ಟ ಅಂದ್ರೆ, ಅಲ್ಲು ಅರ್ಜುನ್ ಅವರ ವೈಲ್ಡ್ ಫೈರ್ ಟೀಶರ್ಟ್ ಧರಿಸಿ, ಮಾಲ್‌ನಲ್ಲಿ ಅವರ ಪುಷ್ಪ ಸಿನಿಮಾ ವೀಕ್ಷಿಸಿದ್ದೆ. ಅಷ್ಟರ ಮಟ್ಟಿಗೆ ಕ್ರೇಜ್ ಇದೆ ಎಂದು ಸಾನ್ವಿ ಸಂದರ್ಶನದಲ್ಲಿ ಹೇಳಿದ್ದಾರೆ.
ಅಲ್ಲದೆ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲು ನಾನು ಪ್ರತಿದಿನವೂ ಕಾತರದಿಂದ ಕಾಯುತ್ತಿದ್ದೇನೆ. ಅವರನ್ನು ಭೇಟಿಯಾಗುವುದು ನನಗೆ ಸುಲಭದ ಮಾತೇ ಆಗಿರಬಹುದು. ಆದರೆ ನಾನು ಏನಾದರೂ ಸಾಧಿಸಿದಾಗ ಮಾತ್ರ ಅವರನ್ನು ಭೇಟಿ ಮಾಡಲು ಇಷ್ಟಪಡುತ್ತೇನೆ. ಏಕೆಂದರೆ ಅವರು ನನ್ನನ್ನು ನನ್ನ ಕೆಲಸದಿಂದ ಗುರುತಿಸಬೇಕು ಎಂದಿದ್ದಾರೆ.
Comments are closed.