Bengaluru: ಬ್ಯಾಗ್ ತುಂಬಾ ಎಗರಿಸಿದ ಬಂಗಾರ ಮತ್ತು ಮೊಬೈಲ್ ಪೋನ್: ಕಿಲಾಡಿ ಕಳ್ಳಿಯರು ವಶ

Bengaluru: ಬೆಂಗಳೂರು ಮಹಾನಗರ ಸಾರಿಗೆ ಬಸ್ ಮಹಿಳಾ ಕಂಡಕ್ಟರ್ ಚಾಣಕ್ಷತನದಿಂದ ಕಿಲಾಡಿ ಕಳ್ಳಿಯರ ಗ್ಯಾಂಗ್ ಸಿಕ್ಕಿಬಿದ್ದಿದೆ. ಮಾ. 10 ರಾತ್ರಿ 7:15 ಕ್ಕೆ ಮೆಜೆಸ್ಟಿಕ್ನಿಂದ ದೇವನಹಳ್ಳಿ ಬಳಿಯ ವಿಜಿಪುರಕ್ಕೆ ಹೋಗುತ್ತಿದ್ದ ಡಿಪೋ- 50ಕ್ಕೆ ಸೇರಿದ ಬಿಎಂಟಿಸಿ ಬಸ್ ಅನ್ನು ಆಂಧ್ರಪ್ರದೇಶದಿಂದ ಬಂದ ನಾಲ್ವರು ಮಹಿಳೆಯರು ಹತ್ತಿದ್ದಾರೆ. ಬಸ್ ಪ್ರಯಾಣದ ವೇಳೆ ಪಕ್ಕದಲ್ಲಿದ್ದ ಮಹಿಳೆ ಬ್ಯಾಗ್ನಿಂದ ಓರ್ವ ಕಳ್ಳಿ ಮೊಬೈಲ್ ಕಳ್ಳತನ ಮಾಡುತ್ತಿದ್ದಳು. ಇದನ್ನು, ನೋಡಿದ ಮಹಿಳಾ ಕಂಡಕ್ಟರ್ ಚಾಲಕ ಮುನಿರತ್ನ ಅವರಿಗೆ ವಿಚಾರ ತಿಳಿಸಿದ್ದಾರೆ.
ಬಸ್ ಡೋರ್ ಲಾಕ್ ಮಾಡಿ ಪೋಲಿಸರು ಬರುವರೆಗೂ ಬಸ್ ನಿಲ್ಲಿಸಿ ಎಂದು ಹೇಳಿದ್ದಾರೆ. ಮಹಿಳಾ ಕಂಡಕ್ಟರ್ ಮಾತನಿನಂತೆ ಚಾಲಕ ಡೋರ್ ಲಾಕ್ ಮಾಡಿ, ಪೊಲೀಸರು ಬರುವವರೆಗೂ ಬಸ್ ನಿಲ್ಲಿಸಿದ್ದಾರೆ. ಚಾಲಕ ಡೋರ್ ಲಾಕ್ ಮಾಡ್ತಿದ್ದಂತೆ ಕಳ್ಳಿಯರು ಮಗು ಅಳುತ್ತಿದೆ. ನಾವು ಹೋಗಬೇಕೆಂದು ನಾಟಕವಾಡಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಚಾಲಕ ಮಂಜುನಾಥ್ ಡೋರ್ ತೆರೆಯಲಿಲ್ಲ. ಬಳಿಕ, ಪೋಲಿಸರು ಬಂದ ಮೇಲೆ ಮಹಿಳೆಯರ ಬ್ಯಾಗ್ ಚೆಕ್ ಮಾಡಿದಾಗ ಬ್ಯಾಗ್ ತುಂಬ ಬಂಗಾರ ಮತ್ತು ಸಾಕಷ್ಟು ಮೊಬೈಲ್ ಪೋನ್ ಪತ್ತೆಯಾಗಿವೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Comments are closed.