B S Yediyurappa: ಮಾ.24ಕ್ಕೆ ಕಲಬುರಗಿ ಯುವತಿ ಜೊತೆ ಯಡಿಯೂರಪ್ಪ ಮೊಮ್ಮಗನ ನಿಶ್ಚಿತಾರ್ಥ!

B S Yediyurappa: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗ ಸುಭಾಶ್ ಅವರ ನಿಶ್ಚಿತಾರ್ಥ ಮಾ.24ರಂದು ಕಲಬುರಗಿ ದಾಸೋಹ ಪರಿವಾರದ ಲಿಂಗರಾಜಪ್ಪ ಅಪ್ಪ- ದೀಪಾಲಿ ಪುತ್ರಿ ಶ್ರಾವಣಾ ಅವರೊಂದಿಗೆ ಕಲಬುರಗಿಯ ಖಾಸಗಿ ರೆಸಾರ್ಟ್‌ನಲ್ಲಿ ನಡೆಯಲಿದೆ. ಯಡಿಯೂರಪ್ಪ ಅವರು ಈಗಾಗಲೇ ತಮ್ಮ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಕಲಬುರಗಿಯ ಉದ್ಯಮಿ ಶಿವಾನಂದ ಮಾಸ್ಕರ್ ಅವರ ಪುತ್ರಿ ಪ್ರೇಮಾ ಅವರೊಂದಿಗೆ ವಿವಾಹ ಮಾಡಿದ್ದರು. ಇದೀಗ ತಮ್ಮ ಮೊಮ್ಮಗ ಸುಭಾಶ್‌ನಿಗೂ ಕಲಬುರಗಿಯಿಂದಲೇ ಸಂಬಂಧ ಹುಡುಕಿ ಗಮನ ಸೆಳೆದಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಪುತ್ರ, ಸಂಸದ ಬಿ. ವೈ. ರಾಘವೇಂದ್ರ -ತೇಜಸ್ವಿನಿ ದಂಪತಿಯ ಪುತ್ರ ಸುಭಾಶ್‌ನಿಗೂ ಹಾಗೂ ಶ್ರಾವಣಾ (ಕಾನೂನು ಪದವೀಧರೆ) ಅವರಿಗೂ ಮಾ.24ರಂದು ಕಲಬುರಗಿಯ ಖಾಸಗಿ ರೆಸಾರ್ಟ್‌ನಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಈ ಬೆಳವಣಿಗೆಯೊಂದಿಗೆ ಮಾಜಿ ಸಿಎಂ ಬಿಎಸ್‌ವೈ ಹಾಗೂ ದಾಸೋಹ ಮನೆತನದ ಲಿಂಗರಾಜಪ್ಪ ಪರಿವಾರದ ನಡುವಿನ ವೈವಾಹಿಕ ಸಂಬಂಧ ಬೀಗತನದ ಬೆಸುಗೆ ಸುದ್ದಿಗೆ ಗ್ರಾಸವಾಗಿದೆ.
Comments are closed.