Tamilunadu: ಭಾರತದ ರೂಪಾಯಿಗೆ ತನ್ನದೇ ಹೊಸ ಚಿಹ್ನೆ ಬಿಡುಗಡೆ ಮಾಡಿದ ತಮಿಳುನಾಡು ಗೌರ್ಮೆಂಟ್ !!

Tamilunadu : ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರಗಳ ನಡುವಿನ ಮುಸುಕಿನ ಗುದ್ದಾಟ ಇದೀಗ ಬೀದಿರಂಪವಾಗುತ್ತಿದೆ. ಕೇಂದ್ರ ಸರ್ಕಾರ ಯಾವುದೇ ನಿಯಮವನ್ನು ತಂದರು ಕೂಡ ಅದನ್ನು ತಮಿಳುನಾಡಿನ ಸ್ಟಾಲಿನ್ ಗೌರ್ಮೆಂಟ್ ಹಿಂದೆ ಮುಂದೆ ನೋಡದೆ ತಿರಸ್ಕರಿಸಿ ಬಿಡುತ್ತಿದೆ. ಅಂತೆಯೇ ಇದೀಗ ಕೇಂದ್ರ ಸರ್ಕಾರ ರೂಪಿಸಿದ್ದ ಭಾರತದ ರೂಪಾಯಿಯ ಚಿಹ್ನೆಯನ್ನು ತಿರಸ್ಕರಿಸಿರುವ ಸ್ಟಾಲಿನ್ ಸರ್ಕಾರ, ರೂಪಾಯಿಗೆ ತನ್ನದೇ ಹೊಸ ಚಿಹ್ನೆಯನ್ನು ಬಿಡುಗಡೆ ಮಾಡಿದೆ.

ಹೌದು, ಸ್ಟಾಲಿನ್ ನೇತೃತ್ವದ ತಮಿಳುನಾಡಿನ (Tamil Nadu) ಡಿಎಂಕೆ ಸರ್ಕಾರವು ಭಾರತೀಯ ರೂಪಾಯಿ ಚಿಹ್ನೆಗೆ ತದ್ವಿರುದ್ದವಾಗಿ ಹೊಸ ಚಿಹ್ನೆಯನ್ನು ಬುಡುಗಡೆ ಮಾಡಿದೆ. ತಾನು ಮಂಡಿಸಿದ 2025-26ರ ರಾಜ್ಯ ಬಜೆಟ್​ನ ಲೋಗೋದಲ್ಲಿ ಭಾರತೀಯ ರೂಪಾಯಿ (Indian rupee) ಚಿಹ್ನೆ (₹) ಯನ್ನು ತೆಗೆದುಹಾಕಿ, ಅದರ ಬದಲಿಗೆ ತಮಿಳು ಭಾಷೆಯಲ್ಲಿ (Tamil language) ‘ರೂ’ (ரூ) ಎಂಬ ಅಕ್ಷರವನ್ನು ಬಳಸಿದೆ.

ಅಂದಹಾಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಮೂರು ಭಾಷಾ ಸೂತ್ರದ ವಿರುದ್ಧ ತೀವ್ರ ವಿರೋಧವನ್ನು ವ್ಯಕ್ತಪಡಿಸಿ, ತಮಿಳುನಾಡು ಎರಡು ಭಾಷಾ ನೀತಿಯನ್ನು (ತಮಿಳು ಮತ್ತು ಇಂಗ್ಲಿಷ್) ಅನುಸರಿಸುತ್ತಿದ್ದು, ಮೂರು ಭಾಷಾ ಸೂತ್ರವು ಹಿಂದಿಯನ್ನು ಒತ್ತಾಯಿಸುವ ಪ್ರಯತ್ನವೆಂದು ಆರೋಪಿಸಿದೆ. ಈ ವಿವಾದದ ನಡುವೆ, ರಾಜ್ಯ ಸರ್ಕಾರವು ತನ್ನ ಬಜೆಟ್ ಲೋಗೋದಲ್ಲಿ ರೂಪಾಯಿ ಚಿಹ್ನೆಯನ್ನು ಬದಲಿಸಿ ತಮಿಳು ಅಕ್ಷರ ‘ரூ’ (ತಮಿಳಿನಲ್ಲಿ ರೂಪಾಯಿಗೆ ‘ರುಬಾಯ್’ ಎಂದು ಕರೆಯಲಾಗುತ್ತದೆ, ಅದರ ಮೊದಲ ಅಕ್ಷರ ‘ரூ’) ಬಳಸುವ ಮೂಲಕ ತನ್ನ ಭಾಷಾ ನಿಲುವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎನ್ನಲಾಗಿದೆ.

ಇನ್ನು ಪ್ರಸ್ತುತ ಭಾರತೀಯ ರೂಪಾಯಿ ಚಿಹ್ನೆ (₹)ಯನ್ನು 2010ರಲ್ಲಿ ಡಿ. ಉದಯ ಕುಮಾರ್ ವಿನ್ಯಾಸಗೊಳಿಸಿದರು. ಇದು ದೇವನಾಗರಿ ಅಕ್ಷರ ‘र’ ಮತ್ತು ಲ್ಯಾಟಿನ್ ಅಕ್ಷರ ‘R’ನ ಸಂಯೋಜನೆಯಾಗಿದೆ. ತಮಿಳುನಾಡು ಸರ್ಕಾರವು ಈ ಚಿಹ್ನೆಯನ್ನು ತೆಗೆದು ‘ரூ’ ಬಳಸುವ ಮೂಲಕ ಸ್ಥಳೀಯ ಭಾಷೆಗೆ ಆದ್ಯತೆ ನೀಡಿದೆ. ಆದರೆ, ಇದು ಕೇವಲ ಬಜೆಟ್ ಲೋಗೋಗೆ ಸೀಮಿತವಾಗಿದ್ದು, ಚಲಾವಣೆಯಲ್ಲಿರುವ ನೋಟುಗಳು ಅಥವಾ ನಾಣ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ.

Comments are closed.